Home ಟಾಪ್ ಸುದ್ದಿಗಳು ಲಕ್ಷದ್ವೀಪದ ಮದ್ರಸ ಧ್ವಂಸಗೊಳಿಸದಂತೆ ಕೇರಳ ಹೈಕೋರ್ಟ್ ಆದೇಶ

ಲಕ್ಷದ್ವೀಪದ ಮದ್ರಸ ಧ್ವಂಸಗೊಳಿಸದಂತೆ ಕೇರಳ ಹೈಕೋರ್ಟ್ ಆದೇಶ

ಕೊಚ್ಚಿ, ಜು. 29: ಬಹು ಕಾಲದಿಂದ ಇದ್ದ ಮದ್ರಸಾ ಒಂದನ್ನು ಧ್ವಂಸಗೊಳಿಸಲು ಲಕ್ಷದ್ವೀಪ ಆಡಳಿತ ನೀಡಿದ್ದ ನೋಟೀಸನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.

ನಾಲ್ಕು ವಾರದೊಳಗೆ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಆಡಳಿತಕ್ಕೆ ನ್ಯಾಯಾಲಯ ಆದೇಶಿಸಿದೆ.
ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿರುವ ಅಲ್ ಮದ್ರಸತುಲ್ ಉಲೂಮಿಯ ಇದರ ಅಧ್ಯಕ್ಷರಾದ ಜೈನುಲ್ ಅಬೀದ್ ಅವರ ಅರ್ಜಿಯನ್ನು ವಿಚಾರಣೆ ಮಾಡಿ ನ್ಯಾಯಾಲಯ ಈ ತೀರ್ಪು ನೀಡಿದೆ. ತಮಗೆ ಪಟ್ಟಾ ಆದ ಭೂಮಿಯಲ್ಲಿ ಇರುವ ಮದ್ರಸಾ ಕೆಡಹುವ ಲಕ್ಷದ್ವೀಪದ ಆಡಳಿತದ ವಿರುದ್ಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈಗ ಇರುವ ಸ್ಥಳದಿಂದ ಮದ್ರಸಾವನ್ನು ಧ್ವಂಸಗೊಳಿಸುವುದು, 1965ರ ಲಖಡೀವ್ ಮಿನಿಕಾಯ್ ಮತ್ತು ಅಮಿನ್ ದೀವಿ ಭೂಕಂದಾಯ ಮತ್ತು ಹಿಡುವಳಿ ನಿಯಂತ್ರಣ ಕಾಯ್ದೆ ಹಾಗೂ 1968ರ ಲಖ್ ಡೀವ್ ಮಿನಿಕಾಯ್ ಮತ್ತು ಅಮಿನ್ ದೀವಿ ದ್ವೀಪಕಲ್ಪ ಭೂ ಹಿಡುವಳಿ ನಿಯಮಗಳಿಗೆ ವಿರುದ್ಧವಾದುದು ಎಂದು ಅಬೀದ್ ದಾವೆ ಹೂಡಿದ್ದರು.

ಅಲ್ಲದೆ ನ್ಯಾಯ ಪರಿಧಿಯಲ್ಲಿ ಸಂಬಂಧಿಸಿದ ಆಡಳಿತದಾರರು ನಿಯಂತ್ರಣ ಕಾಯ್ದೆಯಂತೆ ಭೂಮಿಯನ್ನು ನೀಡುವ ಇಲ್ಲವೆ ತಿರಸ್ಕರಿಸುವ ಬಗೆಗೆ ನೋಟೀಸು ನೀಡುವುದಕ್ಕೆ ಮೊದಲು ಪೂರ್ಣ ಅನುಮತಿ ಪಡೆದಿರಬೇಕು. ಅಲ್ಲದೆ ನೋಟೀಸು ನೀಡಿರುವ ಉಪ ಡೆಪ್ಯೂಟಿ ಕಲೆಕ್ಟರ್ ಅವರು ನಿಯಮದಂತೆ ಇಂಥ ನೋಟೀಸು ನೀಡಲು ಹಕ್ಕು ಹೊಂದಿರುವುದಿಲ್ಲ ಎಂದು ದೂರುದಾರರು ವಾದಿಸಿದ್ದರು.

Join Whatsapp
Exit mobile version