Home ಟಾಪ್ ಸುದ್ದಿಗಳು ನಟಿ ಹನಿ ರೋಸ್‌ ಗೆ ಲೈಂಗಿಕ ಕಿರುಕುಳ: ‘ಬಾಬಿ ಚೆಮ್ಮನ್ನೂರ್‌’ಗೆ ಕೇರಳ ಹೈಕೋರ್ಟ್‌ ಜಾಮೀನು

ನಟಿ ಹನಿ ರೋಸ್‌ ಗೆ ಲೈಂಗಿಕ ಕಿರುಕುಳ: ‘ಬಾಬಿ ಚೆಮ್ಮನ್ನೂರ್‌’ಗೆ ಕೇರಳ ಹೈಕೋರ್ಟ್‌ ಜಾಮೀನು

ತಿರುವನಂತಪುರ: ಬಹುಭಾಷಾ ನಟಿ ಹನಿ ರೋಸ್‌ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೆಮ್ಮನ್ನೂರ್‌ ಜುವೆಲ್ಲರ್ಸ್‌ ನ ಮಾಲೀಕ ಬಾಬಿ ಚೆಮ್ಮನ್ನೂರ್‌ ಅವರಿಗೆ ಕೇರಳ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

ಬಾಬಿ ಚೆಮ್ಮನ್ನೂರ್‌ ಅವರು ನಟಿ ಬಗ್ಗೆ ಫೇಸ್‌ ಬುಕ್‌ ನಲ್ಲಿ ಮಾಡಿರುವ ಪೋಸ್ಟ್ ಅಥವಾ ಹೇಳಿಕೆಗಳಲ್ಲಿ ಡಬಲ್ ಮೀನಿಂಗ್ ಇಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲೂ ನಟಿಯ ವೃತ್ತಿಪರ ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ತಪ್ಪು ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಇದು ಕೂಡಾ ‘ಅವಮಾನಕರ’ ಎಂದು ಕೋರ್ಟ್‌ ಹೇಳಿದೆ.

ಜಾಮೀನು ಅರ್ಜಿಯನ್ನು ಪ್ರಾಸಿಕ್ಯೂಷನ್ ಬಲವಾಗಿ ವಿರೋಧಿಸಿತ್ತು. ಚೆಮ್ಮನೂರ್ ಅವರ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಮಹಿಳೆಯರಿಗೆ ಅವಮಾನ ಮಾಡುವ ಉದ್ದೇಶ ಹೊಂದಿದ್ದವು ಎಂದು ಪ್ರತಿಪಾದಿಸಿದ್ದರು.

ಬಾಬಿ ಅವರಿಗೆ ಜಾಮೀನು ಮಂಜೂರು ಮಾಡುವುದಾದರೇ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದೂ ಪ್ರಾಸಿಕ್ಯೂಷನ್ ಪ್ರತಿಪಾದಿಸಿತ್ತು. ಜನವರಿ 9ರಂದು ಬಾಬಿ ಅವರಿಗೆ ಸ್ಥಳೀಯ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಾಬಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Join Whatsapp
Exit mobile version