Home ಟಾಪ್ ಸುದ್ದಿಗಳು ದಿನಗೂಲಿ ಕಾರ್ಮಿಕರ ವೇತನ| ಕೇರಳಕ್ಕೆ ದೇಶದಲ್ಲೇ ನಂ.1 ಸ್ಥಾನ

ದಿನಗೂಲಿ ಕಾರ್ಮಿಕರ ವೇತನ| ಕೇರಳಕ್ಕೆ ದೇಶದಲ್ಲೇ ನಂ.1 ಸ್ಥಾನ

ಹೊಸದಿಲ್ಲಿ: ಗ್ರಾಮೀಣ ಪ್ರದೇಶದ ದಿನಗೂಲಿ ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ಕೇರಳ ದೇಶದಲ್ಲೇ ಒಂದನೇ ಸ್ಥಾನದಲ್ಲಿ ಇದೆ ಎಂದು ವರದಿಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೇರಳದ ಗ್ರಾಮೀಣ ಕಾರ್ಮಿಕರಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ದೇಶದ ಇತರ ಅಭಿವೃದ್ಧಿ ಹೊಂದಿದ ರಾಜ್ಯಗಳಿಗಿಂತ ಎರಡು ಪಟ್ಟು ಹೆಚ್ಚು ವೇತನ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕರಿಗೆ ದೇಶದಲ್ಲೇ ನೀಡಲಾಗುವ ಸರಾಸರಿ ವೇತನವು 315.3 ರೂಪಾಯಿಗಳಾದರೆ, ಕೇರಳದಲ್ಲಿ ದಿನಕ್ಕೆ 677.6 ರೂಪಾಯಿ ವೇತನ ನೀಡಲಾಗುತ್ತದೆ.

ದೇಶದ ಅತಿದೊಡ್ಡ ಕೈಗಾರಿಕಾ ಮತ್ತು ಅಗ್ರಗಣ್ಯ ಕೃಷಿ ಉತ್ಪಾದಕ ರಾಜ್ಯ ಎಂದು ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಗ್ರಾಮೀಣ ಕಾರ್ಮಿಕನೊಬ್ಬನಿಗೆ ಸರಾಸರಿ 262.3 ರೂ. ವೇತನ ನೀಡಲಾಗುತ್ತದೆ. ಅಭಿವೃದ್ಧಿ ಮತ್ತು ಕೈಗಾರಿಕೀಕರಣದ ಮಾದರಿ ಎಂದು ಹೇಳಲಾಗುವ ಗುಜರಾತ್‌ ನಲ್ಲಿ ಪ್ರತಿ ಕಾರ್ಮಿಕನಿಗೆ ದಿನಗೂಲಿ 239.6 ರೂ. ನೀಡಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಸರಾಸರಿ 286.8 ರೂ ಮತ್ತು ಬಿಹಾರದಲ್ಲಿ 289.3 ರೂ. ನೀಡಲಾಗುತ್ತದೆ. ಕೇರಳದ ನಂತರ ಎರಡನೇ ಸ್ಥಾನದಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ದಿನಕ್ಕೆ ಸರಾಸರಿ 483 ರೂ. ಹಾಗೂ ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 449.5 ರೂ. ನೀಡಲಾಗುತ್ತದೆ.

Join Whatsapp
Exit mobile version