Home ಟಾಪ್ ಸುದ್ದಿಗಳು ಕೇರಳ| ಕ್ಲಿಫ್ ಹೌಸ್ ನಲ್ಲಿ ಬಂದೂಕು ಸ್ಫೋಟ; ಪೊಲೀಸ್ ಅಧಿಕಾರಿ ಅಮಾನತು

ಕೇರಳ| ಕ್ಲಿಫ್ ಹೌಸ್ ನಲ್ಲಿ ಬಂದೂಕು ಸ್ಫೋಟ; ಪೊಲೀಸ್ ಅಧಿಕಾರಿ ಅಮಾನತು

ತಿರುವನಂತಪುರಂ:  ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕ್ಲಿಫ್ ಹೌಸ್ ನಲ್ಲಿ ಬಂದೂಕು ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಕ್ಷಿಪ್ರ ಕಾರ್ಯಪಡೆಯ ಸದಸ್ಯ ಎಸ್ ಐ ಹಾಶಿಮ್ ರೆಹಮಾನ್ ಎಂಬವರು ಅಮಾನತುಗೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಮಂಗಳವಾರ ಕ್ಲಿಫ್ ಹೌಸ್ ಮುಂಭಾಗದ ಗಾರ್ಡ್ ರೂಮ್ ನಲ್ಲಿ ಬಂದೂಕು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಬಂದೂಕು ಸ್ಫೋಟಗೊಂಡಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ರೆಹಮಾನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Join Whatsapp
Exit mobile version