Home ಟಾಪ್ ಸುದ್ದಿಗಳು ಕೇರಳದಲ್ಲಿ ನಾವು ಗೆದ್ದರೆ ಉತ್ತಮ ಗುಣಮಟ್ಟದ ‘ಗೋ ಮಾಂಸ’ : ಬಿಜೆಪಿ ಮುಖಂಡ

ಕೇರಳದಲ್ಲಿ ನಾವು ಗೆದ್ದರೆ ಉತ್ತಮ ಗುಣಮಟ್ಟದ ‘ಗೋ ಮಾಂಸ’ : ಬಿಜೆಪಿ ಮುಖಂಡ

ಕೇರಳ : ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ಗುಣಮಟ್ಟದ ‘ಗೋ ಮಾಂಸ’ ಕೊಡುತ್ತೇವೆ ಎಂದು ಭರವಸೆ ನೀಡುವ ಮೂಲಕ ಕೇರಳದ ಬಿಜೆಪಿ ಮುಖಂಡ ಎನ್. ಶ್ರೀಪ್ರಕಾಶ್  ಎಡವಟ್ಟು ಮಾಡಿಕೊಂಡಿದ್ದಾರೆ.

ಗೋಹತ್ಯೆಯ ವಿರುದ್ಧ ಹಲವು ಕಾನೂನುಗಳನ್ನು ಜಾರಿಗೆ ತರುತ್ತಿರುವ ಬಿಜೆಪಿಯ ಮುಖಂಡನೇ ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಉತ್ತಮ ಗುಣ ಮಟ್ಟದ ಗೋ ಮಾಂಸ ನೀಡುವ ಭರವಸೆ ನೀಡಿ ಇದೀಗ ಬಿಜೆಪಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಒಂದೆಡೆ ಕೇರಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ನಾಯಕನ ಹೇಳಿಕೆಯು ಅಧಿಕಾರವನ್ನು ಪಡೆಯಲು ಬಿಜೆಪಿಗರ ಅರ್ಥಹೀನ ಭರವಸೆಯಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.   

Join Whatsapp
Exit mobile version