ಕೋಯಿಕ್ಕೋಡ್: ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ (ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್) ನಾಲ್ಕನೇ ಪ್ರಕರಣ ಪತ್ತೆಯಾಗಿದೆ.
ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ 14 ವರ್ಷದ ಬಾಲಕ ಅಮೀಬಾ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಿಂದ ರಾಜ್ಯದಲ್ಲಿ ಪತ್ತೆಯಾದ ನಾಲ್ಕನೇ ಪ್ರಕರಣ ಇದಾಗಿದೆ. ಸೋಂಕು ಬಾಧಿತರೆಲ್ಲ ಮಕ್ಕಳಾಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ.
ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್ ( amoebic meningoencephalitis) ಅನ್ನು ‘ಮಿದುಳು ತಿನ್ನುವ ಅಮೀಬಾ’ ಎಂದೂ ಕರೆಯಲಾಗುತ್ತದೆ. ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತದೆ.