Home ಟಾಪ್ ಸುದ್ದಿಗಳು ಮುಸ್ಲಿಮರ ವ್ಯಾಪಾರ ಬಹಿಷ್ಕರಿಸುವ ಹೇಳಿಕೆ: ಕೇರಳ ಮಾಜಿ ಶಾಸಕ ಪಿ.ಸಿ. ಜಾರ್ಜ್ ಬಂಧನ

ಮುಸ್ಲಿಮರ ವ್ಯಾಪಾರ ಬಹಿಷ್ಕರಿಸುವ ಹೇಳಿಕೆ: ಕೇರಳ ಮಾಜಿ ಶಾಸಕ ಪಿ.ಸಿ. ಜಾರ್ಜ್ ಬಂಧನ

ಕೇರಳ: ಹಿಂದೂ ಸಮ್ಮೇಳನದಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕೇರಳ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಜಾರ್ಜ್ ಅನ್ನು ಕೊಟ್ಟಾಯಂನ ಎರಟ್ಟುಪೆಟ್ಟದಲ್ಲಿರುವ ನಿವಾಸದಿಂದ ಫೋರ್ಟ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮುಸ್ಲಿಮರು ನಡೆಸುವ ರಸ್ಟೋರೆಂಟ್ ಗಳಿಗೆ ಹೋಗದಂತೆ ಕರೆ ನೀಡಿದ್ದ ಜಾರ್ಜ್, ಮುಸ್ಲಿಮರ ವ್ಯಾಪಾರವನ್ನು ಬಹಿಷ್ಕರಿಸುವಂತೆಯೂ ಮುಸ್ಲಿಮೇತರರಿಗೆ ಕರೆ ನೀಡಿದ್ದರು.ಜಾರ್ಜ್ ಹೇಳಿಕೆ ಕೇರಳದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಧಾರ್ಮಿಕ ವೈಷಮ್ಯ ಹರಡುವ ಮಾತುಗಳನ್ನಾಡಿದ್ದ ಜಾರ್ಜ್ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿದ್ದರು.

ಶುಕ್ರವಾರ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ್ದ ಜಾರ್ಜ್, ‘ ಜನರ ಸಂತಾನವೃದ್ಧಿ ಸಾಮರ್ಥ್ಯವನ್ನು ಕುಂದಿಸುವ ಮೂಲಕ ದೇಶದಲ್ಲಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಮುಸ್ಲಿಮರು ನಡೆಸುತ್ತಿರುವ ರೆಸ್ಟೊರೆಂಟ್‌ಗಳಲ್ಲಿ ನಿರ್ವೀಯಗೊಳಿಸುವಂತಹ ಅಂಶಗಳನ್ನು ಒಳಗೊಂಡಿರುವ ಟೀ ಮಾರಾಟ ಮಾಡಲಾಗುತ್ತಿದೆ ಎಂದು ನಾಲಗೆ ಹರಿಯಬಿಟ್ಟಿದ್ದರು.

ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪಿ. ಸಿ. ಜಾರ್ಜ್ ಕೇರಳದ ಹಿರಿಯ ರಾಜಕೀಯ ನಾಯಕರಾಗಿದ್ದು,

ಪೂಂಜರ್ ವಿಧಾನಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಕೇರಳ ವಿಧಾನಸಭೆ ಮುಖ್ಯ ಸಚೇತಕ ಕೂಡಾ ಆಗಿದ್ದರು.  

ಪಿ. ಸಿ. ಜಾರ್ಜ್ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಕೇರಳದ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಸಿಪಿಐ(ಎಂ) ಮಾಜಿ ಶಾಸಕರ ಹೇಳಿಕೆ ಖಂಡಿಸಿವೆ.

Join Whatsapp
Exit mobile version