Home ಟಾಪ್ ಸುದ್ದಿಗಳು ಕೇರಳ: ಉದ್ಯೋಗಿಗೆ ದುಬಾರಿ ಮರ್ಸಿಡಿಸ್ ಬೆನ್ಝ್‌ ಕಾರನ್ನು ಉಡುಗೊರೆಯಾಗಿ ನೀಡಿದ ಉದ್ಯಮಿ !

ಕೇರಳ: ಉದ್ಯೋಗಿಗೆ ದುಬಾರಿ ಮರ್ಸಿಡಿಸ್ ಬೆನ್ಝ್‌ ಕಾರನ್ನು ಉಡುಗೊರೆಯಾಗಿ ನೀಡಿದ ಉದ್ಯಮಿ !

ಕೋಝಿಕ್ಕೋಡ್: ಒಂದೇ ಸಂಸ್ಥೆಯಲ್ಲಿ ಕಳೆದ 22 ವರ್ಷಗಳಿಂದ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬರಿಗೆ ಉದ್ಯಮಿಯೊಬ್ಬರು ಸುಮಾರು 50 ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಮರ್ಸಿಡಿಸ್ ಬೆನ್ಝ್‌ GLA CLASS 220 ಮಾಡೆಲ್ ಕಾರನ್ನು ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಕೇರಳದ ಕೋಝಿಕ್ಕೋಡ್’ನಲ್ಲಿ ನಡೆದಿದೆ.
ಕೇರಳದ ಖ್ಯಾತ ಮೊಬೈಲ್ ರೀಟೇಲ್ ಅಂಗಡಿಗಳ ಸಮೂಹವಾದ MyG ಸಂಸ್ಥೆಯಲ್ಲಿ ಮುಖ್ಯ ವ್ಯಾಪಾರ ಅಭಿವೃದ್ಧಿ ಅಧಿಕಾರಿಯಾಗಿರುವ ಸಿಆರ್ ಅನೀಶ್ ಅವರಿಗೆ MyG ಸಂಸ್ಥೆಯ ಮಾಲೀಕ
ಉದ್ಯಮಿ AK ಶಾಜಿ ದುಬಾರಿ ಉಡುಗೊರೆ ನೀಡುವ ಮ‌ೂಲಕ ಜೀವನದಲ್ಲಿ ಎಂದೂ ಮರೆಯಲಾಗದ ‘ಸರ್ಪೈಸ್’ ನೀಡಿದ್ದಾರೆ.

ಅನೀಶ್ ಅವರಿಗೆ ಕಾರು ಹಸ್ತಾಂತರಿಸುವ ಫೋಟೋವನ್ನು ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿರುವ ಉದ್ಯಮಿ ಎಕೆ ಶಾಜಿ, ‘ಪ್ರಿಯ ಅನಿ… ಕಳೆದ 22 ವರ್ಷಗಳಿಂದ ನನ್ನ ಉದ್ಯಮದ ಬೆನ್ನೆಲುಬಾಗಿ ನೀವು ನನ್ನ ಜೊತೆಯಲ್ಲಿದ್ದೀರಿ. ನಿಮ್ಮ ಹೊಸ ಜೊತೆಗಾರರನ್ನು ಇಷ್ಟಪಡುವಿರಿ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದಾರೆ.


ಅನೀಶ್ ನನ್ನ ಉದ್ಯೋಗಿಯಲ್ಲ. ಆತ ನನ್ನ ‘ಪಾಲುದಾರ’. ಇದು ಸಂತೋಷದ ಸಮಯ. ಮುಂದಿನ ದಿನಗಳಲ್ಲಿ ಮತ್ತಷ್ಟು ನಮ್ಮ ‘ಪಾಲುದಾರರು’ ಕಾರುಗಳನ್ನು ಪಡೆಯಲು ಸಾಧ್ಯವಾಗಲಿ’ ಎಂದು ಎಕೆ ಶಾಜಿ ಹೇಳಿದ್ದಾರೆ.

ತಮ್ಮ ಉದ್ಯೋಗಿಗಳಿಗೆ ಶಾಜಿ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಇದು ಮೊದಲೇನಲ್ಲ. ಎರಡು ವರ್ಷಗಳ ಹಿಂದೆ ಆರು‌ ಮಂದಿ ನೌಕರರಿಗೆ ಶಾಜಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.

Join Whatsapp
Exit mobile version