Home ಟಾಪ್ ಸುದ್ದಿಗಳು ಕೇರಳ: ಮೆಸ್ಸಿ, ಎಂಬಾಪೆ ಜೆರ್ಸಿ ಧರಿಸಿ ಹಸೆಮಣೆ ಏರಿದ ವಧು ವರ!

ಕೇರಳ: ಮೆಸ್ಸಿ, ಎಂಬಾಪೆ ಜೆರ್ಸಿ ಧರಿಸಿ ಹಸೆಮಣೆ ಏರಿದ ವಧು ವರ!

ಕೇರಳ: ಮದುವೆ ದಿನ ವಧು ವರರು ಮೆಸ್ಸಿ, ಎಂಬಾಪೆ ಜೆರ್ಸಿ ಧರಿಸಿದ್ದು, ಜೋಡಿಯ ಫುಟ್ಬಾಲ್ ಅಭಿಮಾನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.    

ಕೇರಳದ ಸಚಿನ್ ಆರ್ ಮತ್ತು ಆರ್ ಅಥಿರಾ ಜೋಡಿ ಫುಟ್ಬಾಲ್ ಫೈನಲ್ ಪಂದ್ಯದ ದಿನದಂದೇ ಮದುವೆಯಾಗಿದ್ದು, ಮದುವೆ ಮಂಟಪದಲ್ಲಿ ಫ್ರಾನ್ಸ್ ಹಾಗೂ ಆರ್ಜೆಂಟೀನಾದ ನೆಚ್ಚಿನ ಆಟಗಾರರ ಜೆರ್ಸಿ ಧರಿಸಿ ಸಪ್ತಪದಿ ತುಳಿದಿದ್ದಾರೆ.

ಸಚಿನ್ ಲಿಯೋನೆಲ್ ಮೆಸ್ಸಿ ಅವರ ಅಭಿಮಾನಿಯಾಗಿದ್ದರೆ, ಅಥಿರಾ ಎಂಬಾಪೆ ಬೆಂಬಲಿಗರಾಗಿದ್ದಾರೆ.

ಜೋಡಿ ಜೆರ್ಸಿ ತೊಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

Join Whatsapp
Exit mobile version