Home ಟಾಪ್ ಸುದ್ದಿಗಳು ಕೇರಳ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ಹೆಚ್ಚು ಸ್ಥಾನ

ಕೇರಳ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ಹೆಚ್ಚು ಸ್ಥಾನ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 33 ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 17 ಸ್ಥಾನಗಳಲ್ಲಿ ಗೆದ್ದಿದೆ. ಆಡಳಿತಾರೂಢ ಎಲ್‌ಡಿಎಫ್‌ 10 ಸ್ಥಾನವಷ್ಟೇ ಗೆದ್ದಿದೆ. ಎನ್‌ಡಿಎ ನಾಲ್ಕು ವಾರ್ಡ್‌ಗಳಲ್ಲಿ ಗೆದ್ದಿವೆ.

ಇದಕ್ಕೂ ಮೊದಲು ಕಾಂಗ್ರೆಸ್‌ 11, ಎಲ್‌ಡಿಎಫ್‌ 12 , ಎನ್‌ಡಿಎ ಆರು ವಾರ್ಡ್‌ಗಳಲ್ಲಿ ಗೆದ್ದಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಪ್ರದೇಶ ಕಾಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಸುಧಾಕರನ್‌, ಫಲಿತಾಂಶವು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ಬಗ್ಗೆ ಜನರಿಗಿರುವ ಅಸಮಾಧಾನವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದ ಕರೀಂಕುನ್ನಂ ಗ್ರಾಮ ಪಂಚಾಯಿತಿಯ ನೆಡಿಯಾಕಾಡ್‌ ವಾರ್ಡ್‌ನಲ್ಲಿ ಎಎಪಿ ಅಭ್ಯರ್ಥಿ ಬೀನಾ ಕುರಿಯನ್ ಗೆಲುವು ಸಾಧಿಸಿದ್ದಾರೆ. ಕೋಟಯಂ ಜಿಲ್ಲೆಯ ಅರೀಕ್ಕರದಲ್ಲಿ ಎಎಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ.
ಆಮ್‌ ಆದ್ಮಿ ಪಕ್ಷ ಖಾತೆ ತೆರೆದಿದ್ದು, ಒಂದು ವಾರ್ಡ್‌ನಲ್ಲಿ ಗೆದ್ದಿದೆ. ಎಸ್‌ಡಿಪಿಐ ಒಂದು ಸ್ಥಾನದಲ್ಲಿ ವಿಜಯದ ನಗೆ ಬೀರಿದೆ.

Join Whatsapp
Exit mobile version