Home ಟಾಪ್ ಸುದ್ದಿಗಳು ರಷ್ಯಾ – ಉಕ್ರೇನ್ ಕದನ: ಸಂತ್ರಸ್ತ ಕೇರಳ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಮೀಸಲಿರಿಸಿದ ಸರ್ಕಾರ

ರಷ್ಯಾ – ಉಕ್ರೇನ್ ಕದನ: ಸಂತ್ರಸ್ತ ಕೇರಳ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಮೀಸಲಿರಿಸಿದ ಸರ್ಕಾರ

ಕೊಚ್ಚಿನ್: ರಷ್ಯಾ – ಉಕ್ರೇನ್ ಭೀಕರ ಸಂಘರ್ಷ ಮುಂದುವರಿದಿದ್ದು, ಉಕ್ರೇನ್’ನಿಂದ ಕೇರಳಕ್ಕೆ ಮರಳಿದ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವಾಗಲು ಬಜೆಟ್ ನಲ್ಲಿ 10 ಕೋಟಿ ರೂ. ಅನುದಾನವನ್ನು ಮೀಸಲಿರಿಸುವುದಾಗಿ ಸರ್ಕಾರ ಘೋಷಿಸಿದೆ.

ಇಂದು ಸರ್ಕಾರದ 2022 – 23 ಸಾಲಿನ ಹಣಕಾಸು ಆಯಾಮವನ್ನು ಮಂಡಿಸಿದ ಬಳಿಕ ಪ್ರತಿಕ್ರಿಯಿಸಿದ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಅನಿವಾಸಿ ಕೇರಳೀಯರ ವ್ಯವಹಾರ ಇಲಾಖೆ (NORKA) ಉಕ್ರೇನ್’ನಿಂದ ಮರಳುವ ಸಂತ್ರಸ್ತ ವಿದ್ಯಾರ್ಥಿಗಳಿಗೆ ಅಧ್ಯಯನವನ್ನು ಮುಂದುವರಿಸಲು ಮತ್ತು ಸರ್ಟಿಪಿಕೇಟ್ ಮರಳಿ ಪಡೆಯುವಂತಾಗಲು ನೆರವಾಗಲು ವಿಶೇಷ ಹೆಲ್ಫ್ ಡೆಸ್ಕ್ ಅನ್ನು ತೆರೆಯುವುದಾಗಿ ತಿಳಿಸಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದಾಗಿ ಆರ್ಥಿಕ ಹಿನ್ನೆಡೆಯನ್ನು ಸರಿದೂಗಿಸಲು ಮತ್ತು ಉದ್ಯೋಗವನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯಾಮ ಪರಿಹಾರ ಒದಗಿಸುವ ಭರವಸೆಯಿದೆ ಎಂದು ಹೇಳಲಾಗಿದೆ.

ಪ್ರಸಕ್ತ ರಾಜ್ಯದಲ್ಲಿ ತಲೆದೋರಿರುವ ಹಣದುಬ್ಬರವನ್ನು ಬಗೆಹರಿಸಲು ಮತ್ತು ಆಹಾರ ಭದ್ರತೆಯನ್ನು ನೀಗಿಸಲು ಕೇರಳ ಸರ್ಕಾರ 2000 ಕೋಟಿ ರೂ. ಗಳ ವಿಶೇಷ ಪ್ಯಾಕೇಜನ್ನು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಶಿಕ್ಷಣಕ್ಕೆ 2,546 ಕೋಟಿ ರೂ., ಶಾಲೆಗಳ ಮಧ್ಯಾಹ್ನದ ಭೋಜನಕ್ಕೆ 346 ಕೋಟಿ ರೂ., ವಿಶೇಷಚೇತನ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 15 ಕೋಟಿ ರೂ. ಮೀಸಲಿರಿಸಿರುವುದಾಗಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.

ಮಾತ್ರವಲ್ಲ ರಾಜ್ಯದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಪ್ಯಾಕೇಜನ್ನು ಘೋಷಿಸಲಾಗಿದ್ದು, ಗೃಹಿಣಿಯರಿಗೆ ಉದ್ಯೋಗವಕಾಶದ ಖಾತ್ರಿಪಡಿಸುವ ‘ವರ್ಕ್ ನಿಯರ್ ಹೋಮ್’ ಯೋಜನೆಗೆ 50 ಕೋಟಿ ರೂ. ಮೀಸಲಿಡಲಾಗಿದೆ.ಈ ಯೋಜನೆ ವಿದ್ಯಾವಂತ ಗೃಹಿಣಿಯರಿಗೆ ಸಾಕಷ್ಟು ಉದ್ಯೋಗವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ.

ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್ ಬೋರ್ಡ್ (KIIFB) ಮೂಲಕ 1000 ಕೋಟಿ ರೂ. ಖರ್ಚಿನಲ್ಲಿ ನಾಲ್ಕು ಐಟಿ – ಕಾರಿಡಾರ್ ನಿರ್ಮಾಣ ಮಾಡುವುದಾಗಿ ಸರ್ಕಾರ ತಿಳಿಸಿದೆ. 5 ಜಿ ಯನ್ನು ಉತ್ತೇಜಿಸುವ ಸಲುವಾಗಿ ಹಣಕಾಸು ಸಚಿವರು ಈ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.

Join Whatsapp
Exit mobile version