Home ಟಾಪ್ ಸುದ್ದಿಗಳು ಕೇರಳ ಸ್ಫೋಟ ಪ್ರಕರಣ: ಆಘಾತ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

ಕೇರಳ ಸ್ಫೋಟ ಪ್ರಕರಣ: ಆಘಾತ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

ಮುಂಬೈ:ಇಂದು ಬೆಳಗ್ಗೆ ಧಾರ್ಮಿಕ ಸಭೆಯ ವೇಳೆ ಕೇರಳದಲ್ಲಿ ಸಂಭವಿಸಿದ ಹಲವು ಸ್ಫೋಟಗಳಿಗೆ  ಭಾರತ ಕ್ರಿಕೆಟ್ ದಂತಕಥೆ ಸಚಿನ್ ಆಘಾತ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಸಂಭವಿಸಿದ ಸ್ಫೋಟಗಳಿಂದ ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ, ಮತ್ತು ಗಾಯಗೊಂಡವರ ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ” ಎಂದು ತೆಂಡೂಲ್ಕರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊಚ್ಚಿ ಬಳಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕ್ರಿಶ್ಚಿಯನ್ ಧಾರ್ಮಿಕ ಕೂಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ದುಷ್ಕೃತ್ಯ ಎಸಗಿದ ವ್ಯಕ್ತಿ ಶರಣಾಗಿದ್ದು, ಪ್ರಜ್ಞಾಪೂರ್ವಕವಾಗಿ ಮಾಡಿದ್ದೇನೆಂದು ಹೇಳಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ ಸ್ಫೋಟಗಳನ್ನು ನಡೆಸಲು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಲಾಗಿದೆ ಎಂದು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಕ್ ದರ್ವೇಶ್ ಸಾಹೇಬ್ ತಿರುವನಂತಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊಚ್ಚಿ ಬಳಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕ್ರಿಶ್ಚಿಯನ್ ಧಾರ್ಮಿಕ ಕೂಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಕೇರಳ ಸರಣಿ ಬಾಂಬ್ ಸ್ಫೋಟವನ್ನು  ಮುಸ್ಲಿಮರ ತಲೆಗೆ ಕಟ್ಟಲು ರೆಡಿಯಾಗಿದ್ದ ಕನ್ನಡ ಮಾಧ್ಯಮಗಳು ಹಾಗೂ ರಾಷ್ಟ್ರೀಯ ಚಾನೆಲ್ಗಳಿಗೆ ಭಾರಿ ನಿರಾಸೆ ಆಗುವಂತೆ ಡೊಮಿನಿಕ್ ಮಾರ್ಟಿನ್ ಎಂಬಾತ ಬಾಂಬ್ ಸ್ಪೋಟವನ್ನು ತಾನೆ ನಡೆಸಿರುವುದಾಗಿ ಹೇಳಿ ಶರಣಾಗಿದ್ದು, ಎನ್ ಐ ಎ ಮತ್ತು ಇತರ ಸಂಸ್ಥೆಗಳ‌ ಕೆಲಸವನ್ನು ಸುಲಭಗೊಳಿಸಿದ್ದಾನೆ. ಶರಣಾಗೋ ಮೊದಲು ಫೇಸ್ಬುಕಲ್ಲಿ ಲೈವ್ ಬಂದು ಪ್ರಜ್ಞಾಪೂರ್ವಕವಾಗಿ ಮಾಡಿದ್ದೇನೆಂದು ಹೇಳಿದ್ದಾನೆ. ತನಖೆ ನಡೆಯುತ್ತಿದೆ.

Join Whatsapp
Exit mobile version