Home ಜಾಲತಾಣದಿಂದ ಪಕ್ಷ ತೊರೆದ ಕೇರಳ ಬಿಜೆಪಿಯ ರಾಜ್ಯ ಸಮಿತಿ ಸದಸ್ಯ ರಾಮಸಿಂಹನ್ ಅಬೂಬಕ್ಕರ್

ಪಕ್ಷ ತೊರೆದ ಕೇರಳ ಬಿಜೆಪಿಯ ರಾಜ್ಯ ಸಮಿತಿ ಸದಸ್ಯ ರಾಮಸಿಂಹನ್ ಅಬೂಬಕ್ಕರ್

ತಿರುವನಂತಪುರಂ: ಕೇರಳದ ಬಿಜೆಪಿ  ರಾಜ್ಯ ಸಮಿತಿ ಸದಸ್ಯ ಹಾಗೂ ಮಲಯಾಳಂ ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ರಾಮಸಿಂಹನ್ ಅಬೂಬಕ್ಕರ್ ಬಿಜೆಪಿ ತೊರೆಯುವುದಾಗಿ ತಿಳಿಸಿದ್ದಾರೆ.

‘ಎಲ್ಲದರಿಂದಲೂ ಮುಕ್ತಿ ಪಡೆದುಕೊಂಡು ಧರ್ಮದೊಂದಿಗೆ ಇರುತ್ತೇನೆ’ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಅವರ ಈ ಬರಹ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.

ಮೂಲತಃ ಇಸ್ಲಾಮ್ ಧರ್ಮದವರಾಗಿದ್ದ ಅಬೂಬಕ್ಕರ್ 2021ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ನಂತರ ಆಲಿ ಅಕ್ಬರ್ ಎಂಬ ತಮ್ಮ ಮೂಲ ಹೆಸರನ್ನು ಅವರು ರಾಮಸಿಂಹನ್ ಅಬೂಬಕ್ಕರ್ ಎಂದು ಬದಲಾಯಿಸಿಕೊಂಡಿದ್ದರು. ಅದೇ ವರ್ಷ ಅವರನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯತ್ವ ಹಾಗೂ ಜವಾಬ್ದಾರಿ ಹುದ್ದೆಗಳನ್ನು ನೀಡಿತ್ತು.

Join Whatsapp
Exit mobile version