Home ಟಾಪ್ ಸುದ್ದಿಗಳು ಕೇರಳ BJP ನಾಯಕ ರಂಜಿತ್ ಹತ್ಯೆ| ಐವರು SDPI ಕಾರ್ಯಕರ್ತರ ಬಂಧನ

ಕೇರಳ BJP ನಾಯಕ ರಂಜಿತ್ ಹತ್ಯೆ| ಐವರು SDPI ಕಾರ್ಯಕರ್ತರ ಬಂಧನ

ಬಂಧಿತರು ಹತ್ಯೆಯಲ್ಲಿ ನೇರ ಭಾಗಿಯಾಗಿಲ್ಲವೆಂದ ಪೊಲೀಸರು
ಹರಿಪ್ಪಾಡ್: ಕೇರಳದ ಆಲಪ್ಪುಝದಲ್ಲಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು SDPI ಕಾರ್ಯಕರ್ತರನ್ನು ಬಂಧಿಸಲಾಗಿದೆ.


ಮಣ್ಣಂಜೇರಿ ಮೂಲದ ಸುಧೀರ್, ನಿಶಾದ್, ಆಸಿಫ್, ಹರ್ಷದ್ ಮತ್ತು ಅಲಿ ಬಂಧಿತರು. ಬಂಧಿತರಿಂದ ಎರಡು ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಬಂಧಿತರಲ್ಲಿ ಯಾರೂ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಎಡಿಜಿಪಿ ವಿಜಯ್ ಸಖರಾ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಪೊಲೀಸರ ವಶದಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಘೋಷಿಸಿದ್ದ ನಿಷೇಧಾಜ್ಞೆಯನ್ನು ಡಿ.23ರವರೆಗೆ ವಿಸ್ತರಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ.

ಈ ನಡುವೆ ಪೊಲೀಸರು ಎರಡು ದಿನಗಳಲ್ಲಿ ಅಲಪ್ಪುಝ ಜಿಲ್ಲೆಯಲ್ಲಿ 260 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆ ಇದೆ.

ನಿನ್ನೆ(ಡಿ.21) ನಡೆದ ಸರ್ವಪಕ್ಷ ಸಭೆಯಲ್ಲಿ ಪೊಲೀಸರ ವಿರುದ್ಧ SDPI ನಾಯಕರು ಹರಿಹಾಯ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರನ್ನು ಅನ್ಯಾಯವಾಗಿ ಬಂಧಿಸಿ ಕ್ರೂರ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು SDPI ಆರೋಪಿಸಿದೆ.

Join Whatsapp
Exit mobile version