ಕೊಚ್ಚಿ: ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಇಲ್ಲಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹಗ್ಗಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರನೊಬ್ಬ ದುರಂತ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡುತಳಾ ನಿವಾಸಿ ಮನೋಜ್ ಉಣ್ಣಿ ಮೃತರು. ಭಾನುವಾರ ರಾತ್ರಿ 10.30ಕ್ಕೆ ಘಟನೆ ನಡೆದಿದೆ. ಅಪಘಾತ ನಡೆದ ಕೂಡಲೇ ಸಮೀಪದ ಆಸ್ಪತ್ರೆಗೆ ಉಣ್ಣಿ ಅವರನ್ನು ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.