ಕೇರಳ | 51 ವರ್ಷದ ಮಹಿಳೆಯ ಅನುಮಾನಾಸ್ಪದ ಸಾವು; ಆಕೆಯ 26 ವರ್ಷದ ಪತಿಯ ಬಂಧನ

Prasthutha|

ತಿರುವನಂತಪುರಂ : ಕೇರಳದ ಕಾರಕೋಣಂನ ಥ್ರೆಸ್ಯಾಪುರಂನಲ್ಲಿ 51 ವರ್ಷದ ಮಹಿಳೆಯ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ಆಕೆಯ 26 ವರ್ಷದ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಮಹಿಳೆಯನ್ನು ಸಖಾ ಕುಮಾರಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಅರುಣ್ ನನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯನ್ನು ಶನಿವಾರ ಮುಂಜಾನೆ ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಅಲ್ಲಿ ಆಕೆ ಮೃತಪಟ್ಟಿದ್ದಾರೆ.

- Advertisement -

ಕ್ರಿಸ್ಮಸ್ ಅಲಂಕಾರದ ವೇಳೆ ಪತ್ನಿಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ಪತಿ ಅರುಣ್ ಹೇಳಿದ್ದಾನೆ. ಆದರೆ, ವೈದ್ಯರು ಮಹಿಳೆಯ ಪರೀಕ್ಷೆ ಮಾಡಿದಾಗ, ಅನುಮಾನ ವ್ಯಕ್ತವಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಖಾ ಮತ್ತು ಅರುಣ್ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಸಾವಿಗೆ ಕಾರಣ ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.  

- Advertisement -