ತಿರುವನಂತಪುರಂ: ಕೇರಳದಲ್ಲಿ ಸುಮಾರು 5,000ರಷ್ಟು ಶಿಕ್ಷಕರು ಲಸಿಕೆ ಪಡೆದುಕೊಂಡಿಲ್ಲ ಎಂಬ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.
ಕೋವಿಡ್ ಉನ್ನತ ಮಟ್ಟದ ಸಮಿತಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಮಾಲೋಚಿಸಿದ ನಂತರ ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ತಿಳಿಸಿದ್ದಾರೆ.
ಶಾಲೆಗಳು ಪುನರಾರಂಭಗೊಂಡರೂ ಲಸಿಕೆ ಹಾಕಲು ಶಿಕ್ಷಕರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅನೇಕ ಶಿಕ್ಷಕರು ಆರೋಗ್ಯ ಸಮಸ್ಯೆಗಳ ಕಾರಣ ನೀಡಿ ಲಸಿಕೆಯನ್ನು ಪಡೆಯಲಿಲ್ಲ ಎಂದು ತಿಳಿದುಬಂದಿದೆ. ಇತ್ತೀಚೆಗೆ ಶಾಲಾ ಅವಧಿಯನ್ನು ಸಂಜೆವರೆಗೆ ವಿಸ್ತರಿಸುವಂತೆ ಶಿಕ್ಷಣ ಇಲಾಖೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಲಸಿಕೆ ಹಾಕದೇ ಇರುವ ಶಿಕ್ಷಕರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.