ವಯನಾಡ್: ಕೇರಳದ ವಯನಾಡಿನ ಮಾನಂತವಾಡಿಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಟ್ಯಾಕ್ಸಿ ಡ್ರೈವರ್ ಅಜಿ ಎಂದು ಗುರುತಿಸಲಾಗಿದೆ. ಆನೆ ಆ ವ್ಯಕ್ತಿಯನ್ನು ತುಳಿದು ಕೊಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುಮಾರು ದಿನಗಳಿಂದ ಈ ಕಾಡಾನೆ ಮಾನಂತವಾಡಿ ಜನರಿಗೆ ತೊಂದರೆಯನ್ನು ನೀಡುತ್ತಿದೆ ಎಂದು ಅಲ್ಲಿ ಅರಣ್ಯಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ ಅಧಿಕಾರಿಗಳು ಈ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಬಗ್ಗೆ ಮಾತನಾಡಿದ ವಯನಾಡ್ ಜಿಲ್ಲಾಧಿಕಾರಿ ರೇಣು ರಾಜ್ ಅವರು ಪುರಸಭೆಯ ನಾಲ್ಕು ವಿಭಾಗಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ, ಏಕೆಂದರೆ ಆನೆಯು ಜನವಸತಿಗೆ ಹತ್ತಿರದಲ್ಲಿದೆ. ಕುರುವ, ಕುರುಕ್ಕನಮೂಲ, ಪಯ್ಯಂಬಳ್ಳಿ ಮತ್ತು ಕಾಡಂಕೊಲ್ಲಿ ವಿಭಾಗಗಳಲ್ಲಿ ಸೆಕ್ಷನ್ 144 ಅನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ.