Home ಟಾಪ್ ಸುದ್ದಿಗಳು ಕೇರಳ: ಪ್ರವಾಸಿ ವಾಹನ ಕಂದಕಕ್ಕೆ ಬಿದ್ದು, ಮಗು ಸಮೇತ 3 ಮಂದಿ ಸಾವು

ಕೇರಳ: ಪ್ರವಾಸಿ ವಾಹನ ಕಂದಕಕ್ಕೆ ಬಿದ್ದು, ಮಗು ಸಮೇತ 3 ಮಂದಿ ಸಾವು

ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ವಾಹನವೊಂದು ಆದಿಮಲಿ ಬಳಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ಗಾಯಗೊಂಡಿದ್ದು, ಒಂದು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ

ಅಪಘಾತವು ಮಂಗಳವಾರ ಸಂಜೆ 6 ರ ಸುಮಾರಿಗೆ ಸಂಭವಿಸಿದೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ನಾವು ಇನ್ನೂ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

Join Whatsapp
Exit mobile version