Home ಟಾಪ್ ಸುದ್ದಿಗಳು ಕೀನ್ಯಾ : 42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕಿಲ್ಲರ್ ಜೈಲಿಂದ ಪರಾರಿ

ಕೀನ್ಯಾ : 42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕಿಲ್ಲರ್ ಜೈಲಿಂದ ಪರಾರಿ

ಲಂಡನ್: ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ (ಸೀರಿಯಲ್ ಕಿಲ್ಲರ್) ಜೈಲಿನಿಂದ ಪರಾರಿಯಾಗಿದ್ದಾನೆ.


ಆಗಸ್ಟ್ 19ರಂದು ನೈರೋಬಿ ಜೈಲಿನಿಂದ ಸರಣಿ ಹಂತಕ 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಕೀನ್ಯಾ ನ್ಯಾಷನಲ್ ಪೊಲೀಸ್ ಸರ್ವಿಸ್ ತಿಳಿಸಿದೆ.
ಖಲುಶಾ ತನ್ನ ಹೆಂಡತಿಯೂ ಸೇರಿದಂತೆ 42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾನೆ.


ನೈರೋಬಿಯ ಕ್ವಾರಿಯೊಂದರಲ್ಲಿ ಕತ್ತರಿಸಿದ ಮಹಿಳೆಯರ 9 ಶವಗಳು ಪತ್ತೆಯಾಗಿದ್ದವು. ಕೂಡಲೇ ಎಚ್ಚೆತ್ತುಕೊಂಡು ಭಾರಿ ಕಾರ್ಯಾಚರಣೆ ಮಾಡಿದ ಕೀನ್ಯಾ ಪೊಲೀಸರು ಜುಲೈ 16 ರಂದು ಕಾಲಿನ್ಸ್ ಜುಮೈಸಿ ಖಲುಶಾನನ್ನು ಬಂಧಿಸಿದ್ದರು. ಆದರೆ, ವಿಚಾರಣೆ ನಡೆಯುವ ಹಂತದಲ್ಲೇ ಆತ ತಪ್ಪಿಸಿಕೊಂಡಿದ್ದು ನೈರೋಬಿ ಮಹಿಳೆಯರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

Join Whatsapp
Exit mobile version