Home ಟಾಪ್ ಸುದ್ದಿಗಳು ಕೇಜ್ರಿವಾಲ್ ‘ಉದ್ದೇಶಪೂರ್ವಕ’ ಕಡಿಮೆ ಕ್ಯಾಲರಿ ಆಹಾರ ಸೇವನೆ: ದೆಹಲಿ ಲೆ.ಗವರ್ನರ್

ಕೇಜ್ರಿವಾಲ್ ‘ಉದ್ದೇಶಪೂರ್ವಕ’ ಕಡಿಮೆ ಕ್ಯಾಲರಿ ಆಹಾರ ಸೇವನೆ: ದೆಹಲಿ ಲೆ.ಗವರ್ನರ್

ನವದೆಹಲಿ: ಸಿಎಂ ಅರವಿಂದ ಕೇಜ್ರಿವಾಲ್ ಅವರು ವೈದ್ಯರು ಸೂಚಿಸಿದ ಆಹಾರ ಪದ್ಧತಿಯನ್ನು ಬಹುಶಃ ಉದ್ದೇಶಪೂರ್ವಕವಾಗಿ ಪಾಲಿಸುತ್ತಿಲ್ಲ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಆರೋಪಿಸಿದ್ದಾರೆ.


ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಗೆ ಬರೆದ ಪತ್ರದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ.


ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಜೈಲು ಸೂಪರಿಂಟೆಂಡೆಂಟ್ ವರದಿಯನ್ನು ಉಲ್ಲೇಖಿಸಿರುವ ಅವರು, ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಿದ್ದರೂ ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿಯ ಆಹಾರ ಸೇವನೆಯ ನಿದರ್ಶನಗಳಿವೆ ಎಂದು ಹೇಳಿದ್ದಾರೆ. ಸಕ್ಕರೆ ಕಾಯಿಲೆ ಇರುವುದರಿಂದ, ವೈದ್ಯರ ಸೂಚನೆಯನುಸಾರವೇ ನಿರ್ದಿಷ್ಟ ಆಹಾರ ಕ್ರಮ, ಔಷಧಿ ಹಾಗೂ ಇನ್ಸುಲಿನ್ ನಿಗದಿತ ಡೋಸ್ ತೆಗೆದುಕೊಳ್ಳುವಂತೆ ಕೇಜ್ರಿವಾಲ್ಗೆ ಸಲಹೆ ನೀಡುವಂತೆ ಸಕ್ಸೇನಾ ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Join Whatsapp
Exit mobile version