Home ಟಾಪ್ ಸುದ್ದಿಗಳು ಸ್ವಯಂ ರಕ್ಷಣೆಗಾಗಿ ಬಿಯರ್ ಬಾಟಲುಗಳು, ಶಸ್ತ್ರಾಸ್ತ್ರ್ರ ಗಳನ್ನು ಇಟ್ಟುಕೊಳ್ಳಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಸ್ವಯಂ ರಕ್ಷಣೆಗಾಗಿ ಬಿಯರ್ ಬಾಟಲುಗಳು, ಶಸ್ತ್ರಾಸ್ತ್ರ್ರ ಗಳನ್ನು ಇಟ್ಟುಕೊಳ್ಳಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಉನ್ನಾವೋ: ಗುಂಪು ದಾಳಿಯ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ. ಹಾಗಾಗಿ ಗಾಜಿನ ಬಿಯರ್ ಬಾಟಲುಗಳನ್ನು, ಬಾಣಗಳನ್ನು,ಶಸ್ತ್ರಾಸ್ತ್ರಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದು ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲದಲ್ಲಿ ಮಾಡಿರುವ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ. ಉದ್ರಿಕ್ತ ಸಮೂಹದಿಂದ ರಕ್ಷಿಸಿಕೊಳ್ಳಲು ಜನರೇ ಸ್ವಯಂಸಿದ್ದರಾಗಿರಬೇಕು. ನಿಮ್ಮ ಬೀದಿ, ನೆರೆಹೊರೆ ಅಥವಾ ಮನೆಗೆ ಈ ಗುಂಪು ಇದ್ದಕ್ಕಿದಂತೆ ಬಂದರೆ ಅದಕ್ಕೆ ಪರಿಹಾರವಿದೆ. ಅಂಥ ಅತಿಥಿಗಳಿಗೆ ಪ್ರತಿಮನೆಯೂ ಸಿದ್ಧವಾಗಿರಬೇಕು. ಒಂದು ಅಥವಾ ಎರಡು ಬಾಕ್ಸ್‌ ತಂಪು ಪಾನೀಯಗಳು ಮತ್ತು ಬಾಣಗಳನ್ನು ತೆಗೆದುಕೊಳ್ಳಿ, ಜೈ ಶ್ರೀರಾಮ್‌ ಎಂದು ಪೋಸ್ಟ್‌ ಮಾಡಿರುವ ಅವರು ಜೊತೆಗೆ ಚಿತ್ರವೊಂದನ್ನು ಹಾಕಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ‘ಪೊಲೀಸರು ನಿಮ್ಮನ್ನು ಉಳಿಸಲು ಬರುವುದಿಲ್ಲ, ಬದಲಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಾರೆ, ಈ ಜನರು ‘ಜಿಹಾದ್’ ಮಾಡಿ ಹೋದ ನಂತರ, ಪೊಲೀಸರು ಲಾಠಿಯೊಂದಿಗೆ ಬಂದು ಎಲ್ಲವೂ ಮುಗಿದ ನಂತರ ತನಿಖಾ ಸಮಿತಿಯನ್ನು ರಚಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version