ಹೈದರಾಬಾದ್: ವಿವಾದಿತ ಬಾಲಿವುಡ್ ‘ದಿ ಕಾಶ್ಮೀರ ಫೈಲ್ಸ್’ ಸಿನೆಮಾ ಬಗ್ಗೆ ವಿರೋದ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ದೇಶಕ್ಕೆ ಕಾಶ್ಮೀರದ ಫೈಲ್ಸ್ ಬೇಕಿಲ್ಲ ಅಭಿವೃದ್ಧಿ ಫೈಲ್ಸ್ ಬೇಕು ಎಂದಿದ್ದಾರೆ.
ಜನತೆಯನ್ನು ದಾರಿತಪ್ಪಿಸಿ ದೇಶದ ಸಮಸ್ಯೆಗಳಿಗೆ ಗಮನ ಕೊಡದೆ ಜನರನ್ನ ದಾರಿತಪ್ಪಿಸುವ ಉದ್ದೇಶದಿಂದ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೆಸಿಆರ್ ಆರೋಪಿಸಿದ್ದಾರೆ. ಅಲ್ಲದೇ ಟಿಆರ್‌ಎಸ್ ಪಕ್ಷದ ಸಭೆಯಲ್ಲಿ ಕೆಸಿಆರ್ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ.
ಕೇಂದ್ರ ಸರಕಾರವು ವಿವಾದಿತ ಕಾಶ್ಮೀರ ಫೈಲ್ಸ್ ಚಿತ್ರದ ಕಡೆಗೆ ಗಮನಕೊಡುವುದನ್ನ ಬಿಟ್ಟು, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನಹರಿಸಬೇಕು. ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾದಾಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ರೈತರ ಸಮಸ್ಯೆಗಳನ್ನು ದಾರಿತಪ್ಪಿಸಲು ಕಾಶ್ಮೀರ ಫೈಲ್ಸ್ ಸಿನಿಮಾ ಮುಂದಿಡಲಾಗಿದೆ ಎಂದು ಕೆಸಿಆರ್ ಆರೋಪಿಸಿದರು.