‘ಭಯೋತ್ಪಾದಕ’ನೆಂದು ಗುಜರಾತ್ ATSನಿಂದ UAPA ಅಡಿಯಲ್ಲಿ ಬಂಧಿತನಾಗಿದ್ದ ಕಾಶ್ಮೀರಿ ಯುವಕ ಬಶೀರ್ 11 ವರ್ಷಗಳ ಬಳಿಕ ಬಿಡುಗಡೆ !

Prasthutha|

►ಉಗ್ರರ ನಂಟಿನ ಯಾವುದೇ ಸಾಕ್ಷ್ಯ ನೀಡಲು ವಿಫಲವಾದ ಗುಜರಾತ್ ಪೊಲೀಸ್ !

- Advertisement -

2010ರಲ್ಲಿ ಜರ್ಮನ್ ಸರಕಾರೇತರ ಸಂಸ್ಥೆ  ಮಾಯಾ ಫೌಂಡೇಶನ್ ನಡೆಸಿದ್ದ ಸೀಳು ತುಟಿ ಶಸ್ತ್ರ ಚಿಕಿತ್ಸೆ ತರಬೇತಿ ಶಿಬಿರಕ್ಕೆಂದು ಗುಜರಾತಿಗೆ ಬಂದಿದ್ದ ಕಾಶ್ಮೀರದ ರೈನಾವಾರಿಯ ಯುವಕ ಬಶೀರ್ ಅಹ್ಮದ್ ಬಾಬಾರನ್ನು ಗುಜರಾತಿನ ಭಯೋತ್ಪಾದನಾ ತಡೆ ಪೊಲೀಸರು ಬಂಧಿಸಿದ್ದರು. ಅವರ ಮೇಲೆ ಕರಾಳ UAPA ಕಾಯ್ದೆಯನ್ನು ಹೇರಲಾಗಿತ್ತು.  ಬಶೀರ್ ರನ್ನು ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನೆಂದು ಹೇಳಲಾಗಿತ್ತು. ಆದರೆ ಇದೀಗ ಸುದೀರ್ಘ 11 ವರ್ಷಗಳ ಬಳಿಕ ಯಾವುದೇ ಆರೋಪಗಳು ಸಾಬೀತಾಗದೆ ಬಶೀರ್ ಬಿಡುಗಡೆಗೊಂಡಿದ್ದಾರೆ. ಸಾಕ್ಷ್ಯ ನೀಡುವಲ್ಲಿ ಗುಜರಾತ್ ಪೊಲೀಸರು ವಿಫಲವಾಗಿದ್ದಾರೆ.

2009ರಲ್ಲಿ ಉರ್ದುವಿನಲ್ಲಿ ಮಾಸ್ಟರ್ ಪದವಿ ಪೂರ್ತಿಗೊಳಿಸಿದ್ದ ಬಶೀರ್ 2010 ರ ಮಾಯಾ ಫೌಂಡೇಶನ್ ನ 15 ದಿನಗಳ ಶಿಬಿರದಲ್ಲಿ ಸಂಯೋಜಕರಾಗಿ ಆಯ್ಕೆಯಾಗಿದ್ದರು. ಆದರೆ ಅಲ್ಲಿ ಬಶೀರ್ ಬಂಧನಕ್ಕೊಳಗಾಗಿ ತನ್ನ ಯೌವ್ವನದ ಅಮೂಲ್ಯ ದಿನಗಳನ್ನು ಜೈಲಿನಲ್ಲೇ ಕಳೆಯುವಂತಾಗಿತ್ತು. ಯುವಕರನ್ನು ಶಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳಿಸುವುದು ಬಶೀರ್ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಗುಜರಾತಿಗೆ ಬಂದಿದ್ದರು ಎಂದು ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.

- Advertisement -

ತನ್ನ 32 ವರ್ಷ ಪ್ರಾಯದಲ್ಲಿ ಜೈಲಿಗೆ ಹೋಗಿದ್ದ ಅಮಾಯಕ ಬಶೀರ್, ಅಮೂಲ್ಯ 11 ವರ್ಷಗಳನ್ನು ಮಾಡದ ತಪ್ಪಿಗೆ ಜೈಲಿನಲ್ಲಿ ಕಳೆದಿದ್ದರು. ಗುಜರಾತ್ ನ ಸೆಷನ್ಸ್ ನ್ಯಾಯಾಲಯವು ಬಷೀರ್ ಅಹ್ಮದ್ ಬಾಬಾ (43) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿನ ಆರೋಪಗಳಲ್ಲಿ ತೆರವುಗೊಳಿಸಿ ಬಿಡುಗಡೆಗೆ ಆದೇಶಿಸಿದೆ. ಬಾಬಾ ಅವರು ಉಗ್ರರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಭಯೋತ್ಪಾದನಾ ನಿಗ್ರಹ ದಳದ ಪ್ರಕರಣವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಎ.ನಕುಮ್ ತಿರಸ್ಕರಿಸಿದರು. “ಅವರು ಭಯೋತ್ಪಾದಕ ಶಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.

Join Whatsapp