Home ಟಾಪ್ ಸುದ್ದಿಗಳು ಹಿಂಸಾಚಾರ ಹೆಚ್ಚುತ್ತಿರುವ ನಡುವೆ ಕೆಲಸ ಮಾಡಲು ಬಲವಂತ: ಕಾಶ್ಮೀರಿ ಪಂಡಿತರ ಆರೋಪ

ಹಿಂಸಾಚಾರ ಹೆಚ್ಚುತ್ತಿರುವ ನಡುವೆ ಕೆಲಸ ಮಾಡಲು ಬಲವಂತ: ಕಾಶ್ಮೀರಿ ಪಂಡಿತರ ಆರೋಪ

ಪುಲ್ವಾಮಾ:  ಜಮ್ಮು ಮತ್ತು ಕಾಶ್ಮೀರ ಸರ್ಕಾರವು ತಾವು ರಜೆ ಮತ್ತು ತುರ್ತು ವರ್ಗಾವಣೆಗಾಗಿ ನೀಡಿದ ಅರ್ಜಿಯನ್ನು ನಿರಾಕರಿಸಿ ಹಿಂಸಾಚಾರದ ನಡುವೆಯೂ ನಮ್ಮನ್ನು ಕೆಲಸ ಮಾಡುವಂತೆ ಬಲವಂತ ಮಾಡುತ್ತಿದೆ ಎಂದು ಸರ್ಕಾರಿ ನೌಕರರಾಗಿರುವ ಪಂಡಿತರು ಆರೋಪಿಸಿದ್ದಾರೆ. 

ತಮ್ಮ ಮನವಿಗಳಿಗೆ ಸರಕಾರ ಕಿವಿಗೊಡದೆ ನಮ್ಮನ್ನು ಕೆಲಸ ಮಾಡುವಂತೆ ಒತ್ತಾಯಿಸಿ ಸಾವಿನ ದವಡೆಗೆ ನೂಕುವ ಯತ್ನ ನಡೆಸುತ್ತಿದೆ. ಸರಕಾರ ನಮಗೆ ಯಾವ ರೀತಿಯಲ್ಲೂ ರಕ್ಷಣೆ ನೀಡುತ್ತಿಲ್ಲ ಎಂದು ದೂರಿದ್ದಾರೆ. ಆದರೆ ಕುಲ್ಗಾಮ್ ಮುಖ್ಯ ಶಿಕ್ಷಣಾಧಿಕಾರಿ ಅವರು ನಾವು ಹಿಂದೂ ಸರಕಾರಿ ನೌಕರರ ರಜೆಯನ್ನು ನಿರಾಕರಿಸಿಲ್ಲ ಎಂದು ಪ್ರತಿಕ್ರಯಿಸಿದ್ದಾರೆ

ಕಾಶ್ಮೀರದ ವಿಭಜನೆಯು ಒಂದು ಅದ್ಭುತ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಕೇಂದ್ರಕ್ಕೆ ನಿರಂತರವಾಗಿ ಏರುತ್ತಿರುವ ಪಂಡಿತರ ಸಾವಿನಿಂದ ಕಾಶ್ಮೀರಿಗಳೇ ಛೀಮಾರಿ ಹಾಕುತ್ತಿದ್ದಾರೆ.

Join Whatsapp
Exit mobile version