Home ಟಾಪ್ ಸುದ್ದಿಗಳು 500 ಮೀಟರ್ ಬಿಳಿ ಕಾಗದದ ಮೇಲೆ ಕುರ್ ಆನ್ ಬರೆಯುವ ಮೂಲಕ ವಿಶ್ವದಾಖಲೆ ಮಾಡಿದ ಕಾಶ್ಮೀರಿ...

500 ಮೀಟರ್ ಬಿಳಿ ಕಾಗದದ ಮೇಲೆ ಕುರ್ ಆನ್ ಬರೆಯುವ ಮೂಲಕ ವಿಶ್ವದಾಖಲೆ ಮಾಡಿದ ಕಾಶ್ಮೀರಿ ಕ್ಯಾಲಿಗ್ರಾಫರ್

ನವದೆಹಲಿ: ಕಾಶ್ಮೀರಿ ಕ್ಯಾಲಿಗ್ರಾಫರ್ ಮುಸ್ತಫಾ ಇಬ್ನಿ ಜಮೀಲ್ ಅವರು 500 ಮೀಟರ್ ಬಿಳಿ ಸುರುಳಿ ಕಾಗದದ ಮೇಲೆ ಪವಿತ್ರ ಕುರ್ ನ್ ಬರೆಯುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಅವರು ಯಾವುದೇ ವೃತ್ತಿಪರ ತರಬೇತುದಾರರ ಮಾರ್ಗದರ್ಶನವಿಲ್ಲದೆ ಇದನ್ನು ಏಳು ತಿಂಗಳುಗಳಲ್ಲಿ ಪೂರ್ತಿಗೊಳಿಸಿದ್ದಾರೆ. ಕಾಗದವು 14.5 ಇಂಚು ಅಗಲ ಮತ್ತು 500 ಮೀಟರ್ ಉದ್ದವನ್ನು ಹೊಂದಿದೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯವರಾದ ಮುಸ್ತಫಾ, ಇದು ಅವರ ಮಹತ್ತರ ಕನಸಾಗಿತ್ತು ಎಂದು ತಿಳಿಸಿದ್ದಾರೆ.

ಲಿಂಕನ್ ಬುಕ್ ಆಫ್ ರೆಕಾರ್ಡ್ಸ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ, “ಜಮೀಲ್ ಅಹ್ಮದ್ ಲೋನ್ ಅವರ ಮಗ ಮುಸ್ತಫಾ ಇಬ್ನಿ ಜಮೀಲ್ 500 ಮೀಟರ್ ಬಿಳಿ ಸುರುಳಿ ಕಾಗದದ ಮೇಲೆ ಪವಿತ್ರ ಕುರ್ ಆನ್ ಬರೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದರು” ಎಂದು ಉಲ್ಲೇಖಿಸಿದೆ.

Join Whatsapp
Exit mobile version