ಇಸ್ಲಾಮ್ ಸ್ವೀಕರಿಸಿದ್ದ ಸಿಖ್ ಯುವತಿಯ ಅಪಹರಣ!

Prasthutha|

ಜಮ್ಮು: ಮುಸ್ಲಿಂ ಯುವಕನನ್ನು ಮದುವೆಯಾಗಿ ಇಸ್ಲಾಂ ಸ್ವೀಕರಿಸಿದ್ದ ಸಿಖ್ ಯುವತಿಯನ್ನು ನ್ಯಾಯಾಲಯದ ಆವರಣದಿಂದ ಅಪಹರಿಸಿ ಬಲವಂತದಿಂದ ಸಿಖ್ ಯುವಕನೊಂದಿಗೆ ಮದುವೆ ಮಾಡಿಸಿದ ಘಟನೆ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ವರದಿಯಾಗಿದೆ.

- Advertisement -

ಶಾಹಿದ್ ಭಟ್ (28) ಮತ್ತು ಮನ್ಮೀತ್ ಕೌರ್ (19) ಪ್ರೀತಿಸಿ ಯುವತಿ ಇಸ್ಲಾಂ ಸ್ವೀಕರಿಸಿ ಸೋಯಾ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, ಇಸ್ಲಾಮಿಕ್ ವಿಧಿಗಳ ಪ್ರಕಾರ ಜೋಡಿ ಜೂನ್ 5 ರಂದು ವಿವಾಹವಾಗಿದ್ದರು. ಆದರೆ ಹುಡುಗಿಯ ಕುಟುಂಬ ಇದನ್ನು ವಿರೋಧಿಸಿತ್ತು. ನಂತರ ಕಾನೂನು ಕ್ರಮಗಳ ಪ್ರಕಾರ ದಂಪತಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯದ ಕೋಣೆಯೊಳಗೆ ವಿಚಾರಣೆ ನಡೆಯುತ್ತಿದ್ದಂತೆಯೇ ಬುಡ್ಗಾಮ್ ಜಿಲ್ಲಾ ಗುರುದ್ವಾರ ಸಮಿತಿ ಅಧ್ಯಕ್ಷ ಸಂತಪಾಲ್ ಸಿಂಗ್ ಮತ್ತು ಶ್ರೀನಗರ ಜಿಲ್ಲಾ ಗುರುದ್ವಾರ ಸಮಿತಿ ಅಧ್ಯಕ್ಷ ಜಸ್ಪಾಲ್ ಸಿಂಗ್ ನೇತೃತ್ವದ ಸಿಖ್ಖರ ಗುಂಪೊಂದು ನ್ಯಾಯಾಲಯದ ಸಂಕೀರ್ಣದ ಹೊರಗೆ ಜಮಾಯಿಸಿ “ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ನಂತರ ಮದುವೆ ಮಾಡಿಸಿದ್ದಾರೆ”ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಈ ನಡುವೆ ಯುವತಿ ತನ್ನ ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ನ್ಯಾಯಾಲಯವು ಸೋಯಾಳನ್ನು ತನ್ನ ಗಂಡನೊಂದಿಗೆ ಹೋಗಲು ಅನುಮತಿ ನೀಡಿದ್ದರೂ ಆಕೆಯನ್ನು ಸಿಖ್ಖರು ವಾಹನವೊಂದರಲ್ಲಿ ಅಪಹರಿಸಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುರುದ್ವಾರದಲ್ಲಿ ಸಿಖ್ ಯುವಕನೊಂದಿಗೆ ಬಲವಂತದಿಂದ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp