Home ಟಾಪ್ ಸುದ್ದಿಗಳು ಕಾಶ್ಮೀರ್ ಫೈಲ್ಸ್ ದ್ವೇಷ ಹರಡುವ ಕೊಳಕು ಚಿತ್ರ: ನಿರ್ಮಾಪಕ ಡೈಲಾನ್ ಮೋಹನ್ ಗ್ರೆ

ಕಾಶ್ಮೀರ್ ಫೈಲ್ಸ್ ದ್ವೇಷ ಹರಡುವ ಕೊಳಕು ಚಿತ್ರ: ನಿರ್ಮಾಪಕ ಡೈಲಾನ್ ಮೋಹನ್ ಗ್ರೆ

ನವದೆಹಲಿ: ನೆಟ್ ಫ್ಲಿಕ್ಸ್ ನಲ್ಲಿ ಬ್ಯಾಡ್ ಬಾಯ್ ಬಿಲಿಯನೇರ್ಸ್ ಇಂಡಿಯಾ ಸಾಕ್ಷ್ಯ ಚಿತ್ರ ಮಾಡಿ ಖ್ಯಾತಿ ಗಳಿಸಿದ್ದ ಕೆನಡಾದ ಚಿತ್ರ ತಯಾರಕ ಡೈಲಾನ್ ಮೋಹನ್ ಗ್ರೆ ಅವರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ದ್ವೇಷ ಸಾರುವ ಕೊಚ್ಚೆಯೇ ಹೊರತು ಅದು ಕಲೆಯ ಅನಾವರಣವಲ್ಲ ಎಂದು ಟೀಕಿಸಿದ್ದಾರೆ.


ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರನ್ನು ಟೀಕಿಸಿರುವ ಡೈಲಾನ್ ಅವರು, ಇದನ್ನು ಆಸ್ಕರ್ ಗೆ ಭಾರತದ ಅಧಿಕೃತ ಪ್ರವೇಶದ ಸಿನಿಮಾ ಮಾಡಿರುವುದು ಅಕ್ಷಮ್ಯ ಎಂದಿದ್ದಾರೆ.
ಆಸ್ಕರ್ ನಲ್ಲಿ ಕಾಶ್ಮೀರ್ ಫೈಲ್ಸ್ ಅವಕಾಶ ಎಂಬ ತಯಾರಕ ಅನುರಾಗ ಕಶ್ಯಪ್ ರ ಹೇಳಿಕೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿರುವುದನ್ನು ಖಂಡಿಸಿ ಡೈಲಾನ್, “ಈ ಚಿತ್ರಕ್ಕೆ ಯಾವ ಕಲಾತ್ಮಕ ಮೌಲ್ಯವೂ ಇಲ್ಲ. ಇದು ದ್ವೇಷ ಹರಡುವವರ ಕಸದ ತೊಟ್ಟಿ. ಯಾವುದಾದರೂ ಪಕ್ಷಪಾತ ಮಾಡದ ಸಮಿತಿಯಿಂದ ಆಯ್ಕೆ ನಡೆಯಬೇಕಿತ್ತು. ಅನುರಾಗ್ ಕಶ್ಯಪ್ ಅವರು ಭಾರತದ ಉಳಿದಿರುವ ಹೆಸರನ್ನು ಜಾಗತಿಕವಾಗಿ ಹಾಳು ಮಾಡಿದ್ದಾರೆ.” ಎಂದು ಕುಟುಕಿದ್ದಾರೆ.


ಡೈಲಾನ್ ಅವರು ತಮ್ಮ ಎರಡನೆಯ ಟ್ವೀಟ್ ನಲ್ಲಿ “ಆರ್ ಆರ್ ಆರ್ ಮೂಲತಃ ಠಕ್ಕ ಮತ್ತು ಹಿಂಸಾಸಂತೋಷಿ, ಆದ್ದರಿಂದ ಮತ್ತೂ ಮೇಲೇರಿಲ್ಲ” ಎಂದಿದ್ದರು. ಆದರೆ ಆ ಟ್ವೀಟನ್ನು ಆಮೇಲೆ ಡೈಲಾನ್ ತೆಗೆದುಹಾಕಿದ್ದಾರೆ.
ದೋಬಾರಾ ಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್ ಅವರು ಗಲಾಟಾ ಪ್ಲಸ್ ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ “ಭಾರತದ ಅಧಿಕೃತ ಪ್ರವೇಶಾತಿಯನ್ನು ಆರ್ ಆರ್ ಆರ್ ಪಡೆದರೆ ಅದು ಖಂಡಿತ ಆಸ್ಕರ್ ಅಂತಿಮ ಪಟ್ಟಿಗೆ ಆಯ್ಕೆಯಾಗುವ ಸಾಧ್ಯತೆ 99% ಇದೆ. ಯಾವ ಬಗೆಯ ಸಿನಿಮಾ ಆಯ್ಕೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಆಶಿಸುತ್ತೇನೆ ಕಾಶ್ಮೀರ್ ಫೈಲ್ಸ್ ಅಲ್ಲ ಎಂದು!” ಎಂದಿದ್ದರು.


ಬುಧವಾರ ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ವಿವೇಕ್ ಅವರು, “ಜನಾಂಗೀಯ ಹತ್ಯೆಯನ್ನು ಅಲ್ಲಗಳೆಯುವ ಬಾಲಿವುಡ್ ಜನರು ದೋಬಾರಾ ನಿರ್ಮಾಪಕ ಅನುರಾಗ್ ಮೂಲಕ ಕಾಶ್ಮೀರ್ ಫೈಲ್ಸ್ ಆಸ್ಕರ್ ಗೆ ಆಯ್ಕೆ ಆಗುವುದರ ವಿರುದ್ಧ ಪ್ರಚಾರ ಆರಂಭಿಸಿದ್ದಾರೆ.” ಎಂದು ಹೇಳಿದ್ದರು.
ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್ 2022ರ ಅತಿ ಹೆಚ್ಚು ಗಲ್ಲಾ ಪೆಟ್ಟಿಗೆ ಯಶಸ್ಸು ಪಡೆದ ಸಿನಿಮಾ. 1990ರಲ್ಲಿ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರನ್ನು ಓಡಿಸಲಾಯಿತು ಎನ್ನುವುದನ್ನು ಕತೆ ವಿವರಿಸುತ್ತದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದರು.

Join Whatsapp
Exit mobile version