ಕಾಸರಗೋಡು: ಜಿಲ್ಲೆಯಲ್ಲಿ ಹೆಚ್ಚಿರುವ ಶಾಲೆ, ಕಾಲೇಜು ವಿದ್ಯಾರ್ಥಿನಿಯರನ್ನೇ ಕೇಂದ್ರೀಕರಿಸಿ ಚುಡಾಯಿಸುವ ಕಾಮುಕರ ಕೀಟಲೆಯನ್ನು ನಿಯಂತ್ರಿಸಲು ಕರಾಟೆಯಲ್ಲಿ ವಿಶೇಷ ತರಬೇತಿ ಪಡೆದ ಮಹಿಳಾ ಪೊಲೀಸರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ.
ಈ ತಂಡಗಳು ಮಾರು ವೇಷದಲ್ಲಿ ಬಸ್ಗಳಲ್ಲಿ, ಬಸ್ ನಿಲ್ದಾಣ, ತಂಗುದಾಣಗಳಲ್ಲಿ ಕಾರ್ಯಾಚರಿಸಲಿದೆ. ಬಸ್ಸಿನೊಳಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಕೀಟಲೆ ನೀಡುವುದು, ಕಾಮಚೇಷ್ಟೆ ಪ್ರದರ್ಶಿಸಿದರೆ ಅವರನ್ನು ಬಂಧಿಸಿ ಸೆರೆಮನೆಗೆ ಅಟ್ಟಲಾಗುವುದು.
ಕಾಸರಗೋಡು, ವಿದ್ಯಾನಗರ, ಕುಂಬಳೆ, ಬದಿಯಡ್ಕ, ಮುಳ್ಳೇರಿಯ, ಉಪ್ಪಳ, ಮಂಜೇಶ್ವರ ಸಹಿತ ಜಿಲ್ಲೆಯಾದ್ಯಂತ ಈ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿದೆ.