ಕಾಸರಗೋಡು : ತಲಪಾಡಿ ಗಡಿಯಲ್ಲಿ ನಾಳೆ ( ಆಗಸ್ಟ್3) ಯಿಂದ ಆರ್‌ಟಿಪಿಸಿಆರ್ ಮೊಬೈಲ್ ತಪಾಸಣಾ ಕೇಂದ್ರವನ್ನು ತೆರೆಯಲು ಕಾಸರಗೋಡು ಜಿಲ್ಲಾಡಳಿತ ತೀರ್ಮಾನಿಸಿದೆ.
ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯ ಮಾಡಿರುವುದರಿಂದ ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಸಾವಿರಾರು ಮಂದಿ ಸಮಸ್ಯೆಗೆ ಒಳಗಾಗಿದ್ದು, ತಲಪಾಡಿಯಲ್ಲಿ ಗಡಿಯಲ್ಲಿದ್ದ ಆರ್‌ಟಿಪಿಸಿಆರ್ ತಪಾಸಣಾ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂದು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದರು.
ಈ ನಡುವೆ ಕಾಸರಗೋಡು ಜಿಲ್ಲಾಡಳಿತ ನಾಳೆಯಿಂದ ತಪಾಸಣಾ ಕೇಂದ್ರದ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಿದೆ” ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ. ತಪಾಸಣಾ ಕೇಂದ್ರ ಆರಂಭಿಸುವುದರಿಂದ ಈಗ ಇರುವ ಗೊಂದಲಕ್ಕೆ ಪರಿಹಾರ ಲಭಿಸಲಿದೆ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.