Home ಕರಾವಳಿ ಕಾಸರಗೋಡು: ಬೈಕ್ ಗೆ ಕಾರು ಡಿಕ್ಕಿ| ಯುವಕ ಮೃತ್ಯು

ಕಾಸರಗೋಡು: ಬೈಕ್ ಗೆ ಕಾರು ಡಿಕ್ಕಿ| ಯುವಕ ಮೃತ್ಯು

ಕಾಸರಗೋಡು: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಪೆರಿಯ ಎಂಬಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಆಲಕ್ಕೋಡ್ ಮೂಲದ 31 ವರ್ಷದ ದಿಪಿನ್ ಕುಮಾರ್ ಎಂದು ಗುರುತಿಸಲಾಗಿದೆ. ದಿಪಿನ್ ಜ.10ರಂದು ಸಂಜೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರು ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ದಿಪಿನ್ ನನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಬೇಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version