ಬಳ್ಳಾರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-2025 ರ ಬಳ್ಳಾರಿ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಎಲ್ಲರು ಒಂದೇ ವೇದಿಕೆಯಡಿ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಘಟಕಕ್ಕೆ
ಜಿಲ್ಲಾದ್ಯಕ್ಷರಾಗಿ ಜಾಗೃತಿ ಕಿರಣ ಪತ್ರಿಕೆಯ ಯಾಳ್ಪಿ ವಲಿಭಾಷ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾ ಪತ್ರಿಕೆಯ ವಿ.ರವಿ,
ಉಪಾಧ್ಯಕ್ಷರಾಗಿ ಸುರ್ವಣ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ಕೆ.ಬಜಾರಪ್ಪ, ಗಣಿನಾಡು ಪತ್ರಿಕೆಯ ಕೆ.ಮಲ್ಲಯ್ಯ, ಸಾಕ್ಷಿ ಪತ್ರಿಕೆಯ ಗುರುಶಾಂತ,
ಖಜಾಂಚಿಯಾಗಿ ರಾಜ್ ನ್ಯೂಸ್ ಚಾನಲ್ ನಾಗರಾಜ್ ಸ್ವಾಮಿ,
ಕಾರ್ಯದರ್ಶಿಯಾಗಿ ಹಸಿರು ಕ್ರಾಂತಿ ಪತ್ರಿಕೆಯ ರಾಘುರಾಮ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂಜೆವಾಣಿ ಪತ್ರಿಕೆಯ ಎನ್.ವೀರಭದ್ರ ಗೌಡ,
ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಸಮರ್ಥವಾಣಿ ಪತ್ರಿಕೆಯ ಪಂಪನಗೌಡ, ಆಂಧ್ರ ಜ್ಯೋತಿ ಪತ್ರಿಕೆಯ ಮಲ್ಲಿಕಾರ್ಜುನ, ಸುವರ್ಣ ನ್ಯೂಸ್ ನ ನರಸಿಂಹಮೂರ್ತಿ ಕುಲಕರ್ಣಿ, ಸ್ವತಂತ್ರ ಹೋರಾಟ ಪತ್ರಿಕೆಯ ಶ್ರೀನಿವಾಸ್, ಕೋಲಾರವಾಣಿ ಪತ್ರಿಕೆಯ ಎಂ.ಇ.ಜೋಶಿ, ಸಂಜೆವಾಣಿ ಪತ್ರಿಕೆಯ ಅಶೋಕ್, ಹೊಸದಿಗಂತ ಪತ್ರಿಕೆಯ ವೆಂಕಟೇಶ್ ದೇಸಾಯಿ, ಕಂಪ್ಲಿಯ ಈನಮ್ಮ ಕನ್ನಡ ನಾಡು ಪತ್ರಿಕೆಯ ಬಿ.ರಸೂಲ್, ಕಂಪ್ಲಿಯ ಸಂಯುಕ್ತ ಕರ್ನಾಟಕ ಪತ್ರಿಕೆ ದ್ಯಾಮನಗೌಡ, ಕುರುಗೋಡು ಉದಯವಾಣಿ ಪತ್ರಿಕೆಯ ಮಣ್ಣೂರು ಸುಧಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.