ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪತ್ರಿಕಾರಂಗ ಬಲಿಷ್ಠವಾಗಿದ್ದರೆ ಪ್ರಜಾಪ್ರಭುತ್ವ ಸದೃಢವಾಗಿರುವುದು. ಆದರೆ ಕೇಂದ್ರ ಸರ್ಕಾರ ದೆಹಲಿಯ ಬಿಬಿಸಿ ಸುದ್ದಿ ಸಂಸ್ಥೆಯ ಕಚೇರಿ ಮೇಲೆ ಐಟಿ ಸರ್ವೆ ಮಾಡುವ ಮೂಲಕ ಮಾಧ್ಯಮಗಳನ್ನು ಹೆದರಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಬಿಬಿಸಿ ಬಿತ್ತರ ಮಾಡಿದ್ದ ಗುಜರಾತ್ ಗಲಭೆ ಕುರಿತಾದ ಕಾರ್ಯಕ್ರಮದ ವಿರುದ್ಧ ಈ ದಾಳಿ ಕಾರ್ಯಚರಣೆ ನಡೆದಿದ್ದು, ಇದನ್ನು ಪತ್ರಿಕಾ ಸ್ವಾತಂತ್ರ್ಯದ ಹರಣ ಎನ್ನಬಹುದು. ಇದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, KUWJ ನಿರ್ದೇಶಕ ಎನ್.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.