Home ಟಾಪ್ ಸುದ್ದಿಗಳು GST  ಸಂಗ್ರಹದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

GST  ಸಂಗ್ರಹದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು: ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಕರ್ನಾಟಕವು ಗುಜರಾತ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ಈ ವರ್ಷದ ಮೇ ತಿಂಗಳಿನಿಂದ, ಜಿಎಸ್ಟಿ ಸಂಗ್ರಹದ ಬೆಳವಣಿಗೆಯಲ್ಲಿ ಕರ್ನಾಟಕವು ಮಹಾರಾಷ್ಟ್ರ ಸೇರಿದಂತೆ ಎಲ್ಲಾ ದೊಡ್ಡ ರಾಜ್ಯಗಳನ್ನು ನಿರಂತರವಾಗಿ ಹಿಂದಿಕ್ಕಿದ್ದು ಎರಡನೇ ಸ್ಥಾನಕ್ಕೆ ಬಂದು ತಲುಪಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು ಏರಡನೇ ಸ್ಥಾನಕ್ಕೆ ಏರಿರುವುದ ಸಂತಸದ ವಿಷಯವಾಗಿದೆ. ಈ ಮುಂಚೆ ಗುಜರಾತ್ ಎರಡನೇಯ ಸ್ಥಾನದಲ್ಲಿತ್ತು.

ರಾಜ್ಯದ ವ್ಯಾಪಾರಸ್ಥರ ನಿಯಮ ಪಾಲನೆ ಹಾಗೂ ಅಧಿಕಾರಿಗಳ ಕಾರ್ಯದಕ್ಷತೆಯಿಂದ ಈ ಯಶಸ್ಸು ರಾಜ್ಯಕ್ಕೆ ಲಭಿಸಿದ್ದು, ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವರಾದ  ನಿರ್ಮಲ ಸೀತಾರಾಮನ್ ಅವರ ಆರ್ಥಿಕ ಸುಧಾರಣಾ ಕ್ರಮಗಳನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಮತ್ತಷ್ಟು ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

Join Whatsapp
Exit mobile version