ಬೆಂಗಳೂರು: ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯನ್ ಅಧ್ಯಕ್ಷರಾಗಿ ಗಂಡಸಿ ಸದಾನಂದ ಸ್ವಾಮಿ ಆಯ್ಕೆಯಾಗಿದ್ದಾರೆ.
ಯೂಟ್ಯೂಬ್ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆಗಳ ಕುರಿತಂತೆ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಮಾಧ್ಯಮ ಕ್ಷೇತ್ರ, ಅದರಲ್ಲೂ ನಿರ್ದಿಷ್ಟವಾಗಿ ಡಿಜಿಟಲ್ ಮಾಧ್ಯಮ ವಲಯ ಅಗಾಧವಾಗಿ ಬೆಳವಣಿಗೆಯಾಗುತ್ತಿದೆ. ವಿದ್ಯುನ್ಮಾನ ಮಾಧ್ಯಮ ವಲಯ ಇಂದು ಹಲವು ವಲಯಗಳಾಗಿವೆ. ವಿದ್ಯುನ್ಮಾನ ಕ್ಷೇತ್ರದ ಪ್ರಮುಖ ವಾಹಿನಿಗಳು ಇಂದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ಸಾರ್ವತ್ರಿಕವಾಗಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ವಾಹಿನಿಗಳ ಸಂಖ್ಯೆ ಹೆಚ್ಚಾಗಿರುವುದು ಗಮನಾರ್ಹವಾಗಿದೆ. ಸಮಾಜದ ಸಮಸ್ಯೆಗಳಿಗೆ ಕಣ್ಣಾಗಿ ಇವು ಕೆಲಸ ಮಾಡುತ್ತಿವೆ. ಪ್ರತಿಯೊಂದು ಘಟನೆಯನ್ನು ಸ್ಥಳದಲ್ಲೇ ಚಿತ್ರೀಕರಣ ಮಾಡಿ ಜನರಿಗೆ ತಲುವಂತೆ ಮಾಡುತ್ತಿರುವ ಏಕೈಕ ಮಾಧ್ಯಮ ಎಂದರೆ ಅದು ಯೂಟ್ಯೂಬ್ ವಾಹಿನಿಗಳು. ಜನಪರ ಧ್ವನಿಯಾಗಿರುವ ಯೂಟ್ಯೂಬ್ ವಾಹಿನಿಗಳಿಗೆ ಸರ್ಕಾರದಿಂದ ಮಾನ್ಯತೆ ಸೇರಿದಂತೆ ಯಾವುದೇ ರೀತಿಯ ಸವಲತ್ತುಗಳು ದೊರೆಯುತ್ತಿಲ್ಲ.
ಮನೋರಂಜನೆ, ರಾಜಕೀಯ, ಅಪರಾಧ ಮತ್ತಿತರ ವಲಯಗಳಲ್ಲಿ ರಾಜ್ಯದಲ್ಲಿ ಸಕ್ರಿಯವಾಗಿ ಮೂರು ಸಾವಿರಕ್ಕೂ ಹೆಚ್ಚು ಯೂಟ್ಯೂಬ್ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಮಾಧ್ಯಮ ವಲಯದಲ್ಲಿ ಈ ವಾಹಿನಿಗಳಿಗೆ ಸೂಕ್ತ ಗೌರವ, ಮನ್ನಣೆ ದೊರೆಯುತ್ತಿಲ್ಲ. ಅಸಂಘಟಿತವಾಗಿರುವ ಯೂಟ್ಯೂಬ್ ವಾಹಿನಿಗಳಿಗೆ ಸಂಘಟನೆಯ ಸ್ವರೂಪ ನೀಡುವ ಮತ್ತು ತನ್ನ ಅಸ್ತಿತ್ವ ಕಾಪಾಡಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಚರ್ಚಿಸಲಾಯಿತು.
- . ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಕೇಂದ್ರದ ವಾರ್ತಾ ಇಲಾಖೆಗೆ ಸೂಕ್ತ ಮನವಿ ಸಲ್ಲಿಸುವ ವಿಷಯಗಳ ಕುರಿತಂತೆ ಚರ್ಚಿಸಲಾಗಿದೆ.
. ಯೂಟ್ಯೂಬ್ ವಾಹಿನಿಗಳ ರಾಜ್ಯಮಟ್ಟದ ಸಂಘಟನೆ ಮಾಡುವ, ಅದರ ಸ್ವರೂಪ, ಬೈಲಾ ರಚಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ.
ಸರ್ಕಾರದ ಹಾಗೂ ಮತ್ತಿತರ ಕಾರ್ಯಕ್ರಮಗಳಲ್ಲಿ ವರದಿ ಮಾಡಲು ಅಧಿಕೃತ ಆಹ್ವಾನ ನೀಡುವ ವಿಷಯಗಳಿಗೆ ಸಂಬಂಧಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಯೂಟ್ಯೂಬ್ ವಾಹಿನಿಗಳಲ್ಲಿ ನೈತಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿ, ಮಾನವೀಯ ಕಳಕಳಿ, ಇತರೆ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಸಂಘಟಕರು ತಿಳಿಸಿದ್ದಾರೆ.