ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತೆ ಮುಂದುವರಿಕೆ : ಸಚಿವ ಆರ್ . ಅಶೋಕ್ ಸುಳಿವು

Prasthutha|

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೆಲವು ದಿನಗಳವರೆಗೆ ಲಾಕ್ ಡೌನ್ ಮುಂದುವರಿಯಲಿರುವ ಸುಳಿವನ್ನು ಪರೋಕ್ಷವಾಗಿ ಸಚಿವ ಆರ್ ಅಶೋಕ್ ನೀಡಿದ್ದಾರೆ. ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆ ಇದನ್ನು ಮುಂದುವರಿಸಿದರೆ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.

ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಸೋಂಕು ನಿಯಂತ್ರಣದ ಬಗ್ಗೆ ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡುತ್ತೇವೆ .ರಾಜ್ಯ ರಾಜಧಾನಿಯಲ್ಲಿ ವಾಸಿಸುವ ನಾಗರೀಕನಾಗಿ ಲಾಕ್ ಡೌನ್ ಮುಂದುವರಿಕೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.

- Advertisement -

ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಮುಗಿಯುವ ಮುನ್ನ 3-4 ದಿನಗಳ ಮುನ್ನ ಸಿಎಂ ಸಭೆ ಮಾಡ್ತಾರೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಆಗಬೇಕು ಎನ್ನುವ ಸಲಹೆ ಕೊಡ್ತೀವಿ. ಆದರೆ ಅಂತಿಮವಾಗಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರವನ್ನು ಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ ಎಂದರು.

ಇದಲ್ಲದೆ ಮಹಾರಾಷ್ಟ್ರ, ದೆಹಲಿಯ ಉದಾಹರಣೆಗಳು ನಮ್ಮ ಮುಂದಿದೆ. ಅಲ್ಲಿಯೂ ಎರಡನೇ ಅಲೆ ಬಂತು , ಆಯಾ ರಾಜ್ಯದವರು ಲಾಕ್ ಡೌನ್ ವಿಸ್ತರಣೆ ಮಾಡಿದರು ಸೋಂಕು ನಿಯಂತ್ರಣಕ್ಕೆ ಬಂತು. ಹೀಗಾಗಿ ‌ನಾವು ಅನುಸರಿಸಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

- Advertisement -