Home Uncategorized ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್‌ ಕೀಪರ್‌ ಖಾಲೀದ್ ಎಂ. ಮೋದಿ ನಿಧನ

ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್‌ ಕೀಪರ್‌ ಖಾಲೀದ್ ಎಂ. ಮೋದಿ ನಿಧನ

ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಮತ್ತು ಅಂತಾರಾಷ್ಟ್ರೀಯ ಹಾಕಿ ಕೋಚ್ ಖಾಲೀದ್ ಎಂ ಮೋದಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

1980 ಮತ್ತು 90ರ ದಶಕದಲ್ಲಿ ತಮ್ಮ ಉತ್ತಮ ಗೋಲ್‌ ಕೀಪಿಂಗ್‌ ಖಾಲೀದ್ ಹೆಸರಾಗಿದ್ದರು. ಖಾಲೀದ್ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ತಂಡದ ಗೋಲ್‌ಕೀಪರ್ ಆಗಿದ್ದರು. ಅಲ್ಲದೇ ರಾಜ್ಯ ತಂಡಕ್ಕೆ ಕೋಚ್ ಕೂಡ ಆಗಿದ್ದರು. ಭಾರತದಲ್ಲಿ ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲು ಹೆಚ್ಚು ಅವಕಾಶ ಸಿಗದ ಕಾರಣ ಕತಾರ್ ತಂಡಕ್ಕೆ ತರಬೇತುದಾರರಾಗಿದ್ದರು. ಅಲ್ಲಿಯ ತಂಡವು ಅಂತರರಾಷ್ಟ್ರೀಯ ಉತ್ತಮ ಸಾಧನೆ ಮಾಡುವ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ಖಾಲೀದ್ ಬೆಂಗಳೂರಿಗೆ ಮರಳಿದ್ದರು.

ಖಾಲೀದ್ ಅವು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕರ್ನಾಟಕದಲ್ಲಿ ಹಾಕಿ ಕ್ರೀಡೆಗೆ ಖಾಲೀದ್ ನೀಡಿದ ಕೊಡುಗೆಯು ಅಸಾಧಾರಣವಾದದ್ದು ಎಂದು ರಾಜ್ಯ ಹಾಕಿ ಸಂಸ್ಥೆಯ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಸ್ಮರಿಸಿದ್ದಾರೆ.

1983ರಲ್ಲಿ ಕೆನ್ಯಾ ಪ್ರವಾಸ ಮಾಡಿದ್ದ ಭಾರತ ಜೂನಿಯರ್ ಹಾಕಿ ತಂಡದಲ್ಲಿ ನಾನು ಮತ್ತು ಖಾಲೀದ್ ಜೊತೆಗೆ ಇದ್ದೆವು. ಆ ಟೂರ್ನಿಯಲ್ಲಿ ಅವರು ಅದ್ಭುತವಾಗಿ ಕೀಪಿಂಗ್ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅವರು ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವರು ಎಂಬ ಭರವಸೆ ನಮ್ಮೆಲ್ಲರಲ್ಲೂ ಮೂಡಿತ್ತು’ ಎಂದು ಒಲಿಂಪಿಯನ್ ಹಾಕಿ ಆಟಗಾರ ಜೂಡ್ ಫೆಲಿಕ್ಸ್ ನೆನಪಿಸಿಕೊಂಡಿದ್ದಾರೆ.

ವಿಶ್ವಕಪ್ ಮತ್ತು ಒಲಿಂಪಿಕ್ ಟೂರ್ನಿಗಳಲ್ಲಿ ಆಡುವ ಹಲವು ಅವಕಾಶಗಳು ಕೊಂಚದರಲ್ಲಿ ತಪ್ಪಿದ್ದವು ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ಗೋಲ್‌ ಕೀಪರ್ ಎಂ.ಪಿ ಗುರುಮೂರ್ತಿ ನಿಧನ

ಕರ್ನಾಟಕ ಹಾಕಿ ತಂಡದ ಮತ್ತೊಬ್ಬ ಗೋಲ್‌ ಕೀಪರ್ ಎಂ.ಪಿ ಗುರುಮೂರ್ತಿ ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಹಾಕಿಪಟುಗಳ ಕುಟುಂಬದ ಮೂರ್ತಿಯವರ ತಂದೆ ಪದವಟೆ ರಾಷ್ಟ್ರೀಯ ತಂಡಕ್ಕೆ ಆಡಿದ್ದರು. ಅಣ್ಣ ಸತ್ಯಮೂರ್ತಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

Join Whatsapp
Exit mobile version