Home ಟಾಪ್ ಸುದ್ದಿಗಳು ಕರ್ನಾಟಕ ಹೈಕೋರ್ಟ್ ತೀರ್ಪು ನಿರಾಶಾದಾಯಕ: ಕಾಂತಪುರಂ ಎ.ಪಿ. ಉಸ್ತಾದ್

ಕರ್ನಾಟಕ ಹೈಕೋರ್ಟ್ ತೀರ್ಪು ನಿರಾಶಾದಾಯಕ: ಕಾಂತಪುರಂ ಎ.ಪಿ. ಉಸ್ತಾದ್

ಕಲ್ಲಿಕೋಟೆ: ಶಿರವಸ್ತ್ರ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪು ತುಂಬಾ ಖೇದಕರ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಕಾರಂದೂರು ಮರ್ಕಝ್ ನಲ್ಲಿ ನಡೆದ ಇಮಾಮ್ ಕಾನ್ಫರೆನ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯದ ಬಗ್ಗೆ ಎಲ್ಲಾ ಗೌರವವನ್ನು ಉಳಿಸಿಕೊಂಡು ಹೇಳುತ್ತಿದ್ದೇನೆ, ಈ ತೀರ್ಪು ಇಸ್ಲಾಮಿನ ಧಾರ್ಮಿಕ ಸಿದ್ಧಾಂತಗಳಿಗೆ ಮತ್ತು ಭಾರತೀಯ ಪ್ರಜೆಯಾದ ಓರ್ವ ವಿಶ್ವಾಸಿಯ ಮೂಲಭೂತ ಹಕ್ಕುಗಳಿಗೆ ಹಾನಿ ಮಾಡುತ್ತದೆ. ಸುಪ್ರೀಂ ಕೋರ್ಟ್ ನಿಂದ ನ್ಯಾಯಯುತ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

ಇಸ್ಲಾಮ್ ನಲ್ಲಿ ಹಿಜಾಬ್ ಅತ್ಯಗತ್ಯವಲ್ಲ ಎಂಬ ನ್ಯಾಯಾಲಯದ ಹೇಳಿಕೆ ಇಸ್ಲಾಮಿನ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಹಿಜಾಬ್ ಕಡ್ಡಾಯ ಎಂಬುವುದರಲ್ಲಿ ಮುಸ್ಲಿಮ್ ಜಗತ್ತಿನಲ್ಲಿ ಎಂದಿಗೂ ಯಾವುದೇ ವಿರೋಧ ಮತ್ತು ವಿವಾದ ನಡೆದಿಲ್ಲ ಎಂದೂ ಅವರು ಹೇಳಿದರು.

Join Whatsapp
Exit mobile version