ಕರ್ನಾಟಕ ತೋಟದಪ್ಪನ ಛತ್ರ ಆಗಿ ಹೋಗಿದೆ, ಪ್ರತಿ ಹಂತದಲ್ಲೂ ಕರ್ನಾಟಕಕ್ಕೆ ಮೋಸ: ವಿಶೇಷ ಅನುದಾನ ನೀಡದ್ದಕ್ಕೆ ಕೇಂದ್ರದ ವಿರುದ್ಧ ಕನ್ನಡಿಗರ ಕಿಡಿ

Prasthutha|

ಬೆಂಗಳೂರು: ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ವಿಶೇಷ ಅನುದಾನದ ರೂಪದಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ದೊಡ್ಡ ಮೊತ್ತದ ನೆರವು ನೀಡಿದೆ. ಆದರೆ ಕರ್ನಾಟಕಕ್ಕೆ ಚಿಕ್ಕಾಸು ನೀಡದಿರುವುದಕ್ಕೆ ಕನ್ನಡ ಪರ ಸಂಘಟನೆಗಳು ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ, ಕರ್ನಾಟಕ ತೋಟದಪ್ಪನ ಛತ್ರ ಆಗಿ ಹೋಗಿದೆ ಪ್ರತಿ ಹಂತದಲ್ಲೂ ಕರ್ನಾಟಕಕ್ಕೆ ಮೋಸ. ನಿರ್ಮಲಾ ಸೀತಾರಾಮನ್ ಆಯ್ಕೆ ಆಗುವಾಗಲೇ ನಾವು ಈ ಆತಂಕ ವ್ಯಕ್ತಪಡಿಸಿದ್ದೆವು. ಒಕ್ಕೂಟ ಸರ್ಕಾರಕ್ಕೆ ದುಡ್ಡು ಬಾಚಲು ಮಾತ್ರ ಕರ್ನಾಟಕ ಬೇಕು, ವಿಶೇಷ ಅನುದಾನ ಬೇಡ ನಮಗೆ ಬರಬೇಕಾದ ಹಣವನ್ನೇ ಕೊಡಲು ಹಿಂದೂ ಮುಂದು ನೋಡುವ ನಾಲಾಯಕ್ ಸರ್ಕಾರ ಎಂದು ಕಿಡಿಕಾರಿದ್ದಾರೆ.


ಲೋಕೇಶ್ ಎಂಬವರು ಟ್ವೀಟ್ ಮಾಡಿ, ರೀ, ಸ್ವಾಮಿ ಸಿದ್ದಗಂಗಾ ಸ್ವಾಮೀಜಿಗಳಿಗೆ ಯಾಕ್ರೀ ಭಾರತ ರತ್ನ ಕೊಟ್ಟಿಲ್ಲ? ಕನ್ನಡಿಗರನ್ನು ಗುತ್ತಿಗೆ ತೆಗೆದುಕೊಂಡಿದ್ದಾರ ನಿಮ್ಮ ಗುಜರಾತಿ ದಂಧೆವಾಲಗಳು?? ಕರ್ನಾಟಕ ವಿರೋಧಿಬಿಜೆಪಿ #ಮೋದಿಮೋಸ ಎಂದು ಹ್ಯಾಷ್ ಟ್ಯಾಗ್ ಬಳಸಿ ಹರಿಹಾಯ್ದಿದ್ದಾರೆ.