Home ಟಾಪ್ ಸುದ್ದಿಗಳು ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಆನೆ ದಾಳಿಗೆ ಪ್ರಾಣ ಕಳೆದುಕೊಂಡ ಅಜೀಶ್ ಎಂಬವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿದೆ. “ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ – ರಾಹುಲ್ ಗಾಂಧಿಯ ವಯನಾಡ್ ನ ಮಡಿಲಿಗೆ” ಎಂದು ಬಿಜೆಪಿ ಟೀಕಿಸಿದೆ.


ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದು, ದಾಳಿ ಮಾಡಿದ್ದ ಆನೆ ಕರ್ನಾಟಕದ್ದು. ಹಾಸನದಲ್ಲಿ ವಶಕ್ಕೆ ಪಡೆದಿದ್ದು, ರೇಡಿಯೋ ಕಾಲರ್ ಕೂಡ ನಮ್ಮ ಇಲಾಖೆಯಿಂದಲೇ ಹಾಕಲಾಗಿತ್ತು. ಅದು ಬೇರೆ ರಾಜ್ಯಕ್ಕೆ ಹೋಗಿ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡಿದ ವರದಿಯಿದೆ. ವರದಿ ತರೆಸಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗಿದೆ. ಆನೆಯನ್ನ ಸಂಬಾಳಿಸುತ್ತಿದ್ದು ನಮ್ಮ ಕರ್ನಾಟಕ ಸರ್ಕಾರ. ಮಾನವೀಯತೆಯನ್ನ ಮೆರೆಯಬಾರದು ಅಂದ್ರೆ ಬಿಜೆಪಿಯವರಿಗೆ ಏನು ಹೇಳಬೇಕು? ಎಂದು ತಿರುಗೇಟು ನೀಡಿದ್ದಾರೆ.

Join Whatsapp
Exit mobile version