October 28, 2020

65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಕರ್ನಾಟಕ ಸರಕಾರ: ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಕೇರಿಗಾರ್ ಗೆ ಸಂಗೀತದಲ್ಲಿ ರಾಜ್ಯೋತ್ಸವ

ಬೆಂಗಳೂರು: ರಾಜ್ಯ ಸರಕಾರವು ಈ ಬಾರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಸಾಹಿತ್ಯದಲ್ಲಿ ಪ್ರೊ.ಸಿ.ಪಿ ಸಿದ್ಧಾಶ್ರಮ, ಸಂಗೀತದಲ್ಲಿ ಅಂಬಯ್ಯ ನುಲಿ ಹಾಗೂ ಪತ್ರಕರ್ತ ಟಿ.ವೆಂಕಟೇಶ್  ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಕೇರಿಗಾರ್ ಅವರಿಗೆ ಸಂಗೀತದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಉಳಿದಂತೆ ಅಂಬಯ್ಯ ನುಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ, ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ (ಬೆಂಗಳೂರು) ಸಂಗೀತದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಾಜ ಸೇವೆಯಲ್ಲಿ ಉಡುಪಿಯ ಮೀರಾನ್ ಸಾಹೆಬ್, ಹೊರನಾಡು ಕನ್ನಡಿಗರಲ್ಲಿ ದಕ್ಷಿಣ ಕನ್ನಡದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಸಂಘ ಸಂಸ್ಥೆಗಳಲ್ಲಿ ಧರ್ಮೋತ್ತಾನ ಟ್ರಸ್ಟ್ ಧರ್ಮಸ್ಥಳ, ವಿಜ್ನಾನದಲ್ಲಿ ಉಡುಪಿ ಶ್ರೀನಿವಾಸ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯದಲ್ಲಿ ಪ್ರೊ ಸಿ.ಪಿ.ಸಿದ್ಧಾಶ್ರಮ ಧಾರವಾಡ, ವಿ.ಮುನಿವೆಂಕಟಪ್ಪ ಕೋಲಾರ, ರಾಮಣ್ಣ ಬ್ಯಾಟಿ ಗದಗ, ವಲೇರಿಯನ್ ಡಿಸೋಜ ವಲ್ಲಿವಗ್ಗ, ಡಿ.ಎನ್.ಅಕ್ಕಿ ಯಾದಗಿರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಅದೇವೇಳೆ, ನ್ಯಾಯಾಂಗದಲ್ಲಿ ಕೆ.ಎನ್.ಭಟ್ ಬೆಂಗಳೂರು ಮತ್ತು ಎ.ಕೆ.ವಿಜಯಕುಮಾರ ಉಡುಪಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಧ್ಯಮದಲ್ಲಿ ಸಿ ಮಹೇಶ್ವರನ್ ಮೈಸೂರು ಮತ್ತು ಟಿ.ವೆಂಕಟೇಶ ಬೆಂಗಳೂರು ಆಯ್ಕೆಯಾಗಿದ್ದಾರೆ.

ಟಾಪ್ ಸುದ್ದಿಗಳು