Home ಟಾಪ್ ಸುದ್ದಿಗಳು ಬಲವಂತದ ಸಾಲ ವಸೂಲಿಗೆ ಬ್ರೇಕ್ ; ಕಾನೂನು ತಿದ್ದುಪಡಿಗೆ ಒಪ್ಪಿಗೆ

ಬಲವಂತದ ಸಾಲ ವಸೂಲಿಗೆ ಬ್ರೇಕ್ ; ಕಾನೂನು ತಿದ್ದುಪಡಿಗೆ ಒಪ್ಪಿಗೆ

ಬೆಂಗಳೂರು: ಮೀಟರ್​ ಬಡ್ಡಿ ಕಿತ್ತೆಸೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಒಂದು ವೇಳೆ ತಿದ್ದುಪಡಿಯಾಗಿ ಜಾರಿಗೆ ಬಂದರೆ ಬಲವಂತವಾಗಿ ಸಾಲ ವಸೂಲಾತಿಗೆ ಬ್ರೇಕ್ ಬೀಳಲಿದೆ.

 “ಕರ್ನಾಟಕ ಮನಿ ಲಾಂಡರಿಂಗ್ ಆಕ್ಟ್​ನ ಕಲಂ 38 ಮತ್ತು 39ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಹಿಂದೆ ಒತ್ತಾಯಪೂರ್ವಕ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ನೀಡಲಾಗುತಿತ್ತು, ಆದರೆ ಈಗ 6 ತಿಂಗಳ ಬದಲು 1 ವರ್ಷಕ್ಕೆ ಹೆಚ್ಚಿಸಲಾಗಿದೆ” ಎಂದು ಗೃಹ ಹಾಗೂ ಕಾನೂನು ಸಚಿವ, ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಮೀಟರ್ ಬಡ್ಡಿ ದಂಧೆ ನಡೆಸುವವರಿಗೆ ದೊಡ್ಡ ಬ್ರೇಕ್ ಬೀಳಲಿದ್ದು ಕೈಸಾಲ, ಮೀಟರ್ ಬಡ್ಡಿ ಕೋರರಿಗೆ ತಲೆನೋವಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಸಾಲ ಕೊಟ್ಟು ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ, ಬಲವಂತದಿಂದ ಸಾಲ ವಸೂಲಿ ಮಾಡೋದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

Join Whatsapp
Exit mobile version