Home ಟಾಪ್ ಸುದ್ದಿಗಳು ಉಪಚುನಾವಣೆ ಮತ ಎಣಿಕೆ | ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನಗೆ ಭಾರೀ ಮುನ್ನಡೆ | ಶಿರಾದಲ್ಲೂ ಬಿಜೆಪಿ...

ಉಪಚುನಾವಣೆ ಮತ ಎಣಿಕೆ | ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನಗೆ ಭಾರೀ ಮುನ್ನಡೆ | ಶಿರಾದಲ್ಲೂ ಬಿಜೆಪಿ ಮುನ್ನಡೆ

ಬೆಂಗಳೂರು : ಕರ್ನಾಟಕದಲ್ಲಿ ನಡೆದಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಮುನ್ನಡೆಯಲ್ಲಿದೆ. ಮತದಾನೋತ್ತರ ಸಮೀಕ್ಷೆಗಳು ಎರಡೂ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಹೇಳಿದ್ದವು. ಹೀಗಾಗಿ, ಆರಂಭಿಕ ಮುನ್ನಡೆ ಗಮನಿಸಿದರೆ, ಇದು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಮತ ಗಳಿಕೆ ಪ್ರಮಾಣ ಪ್ರತಿ ಸುತ್ತಿನಲ್ಲೂ ಹೆಚ್ಚುತ್ತಲೇ ಹೋಗಿದೆ. ಶಿರಾದಲ್ಲೂ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಮುನ್ನಡೆ ವಿವರ :

ಮೂರನೇ ಸುತ್ತಿನ ವಿವರ (ಮುನಿರತ್ನ – 9 ಸಾವಿರಗಳ ಮುನ್ನಡೆ)

ಮುನಿರತ್ನ (ಬಿಜೆಪಿ ) – 15,110

ಕುಸುಮಾ (ಕಾಂಗ್ರೆಸ್) – 8,692

ಎರಡನೇ ಸುತ್ತಿನ ವಿವರ (ಮುನಿರತ್ನ (5060 ಮುನ್ನಡೆ)

ಮುನಿರತ್ನ (ಬಿಜೆಪಿ ) – 9,950

ಕುಸುಮಾ (ಕಾಂಗ್ರೆಸ್) – 4,890

ಕೃಷ್ಣಮೂರ್ತಿ (ಜೆಡಿಎಸ್) – 2,344

ಮೊದಲ ಸುತ್ತಿನ ವಿವರ

ಮುನಿರತ್ನ (ಬಿಜೆಪಿ ) – 5,300

ಕುಸುಮಾ (ಕಾಂಗ್ರೆಸ್) – 2,082

ಕೃಷ್ಣಮೂರ್ತಿ (ಜೆಡಿಎಸ್) – 1,100

ಅಂಚೆ ಮತದಲ್ಲಿ ಮುನಿರತ್ನ ಮುನ್ನಡೆ

ಮುನಿರತ್ನ (ಬಿಜೆಪಿ ) – 253

ಕುಸುಮಾ (ಕಾಂಗ್ರೆಸ್) – 112

ಕೃಷ್ಣಮೂರ್ತಿ (ಜೆಡಿಎಸ್) – 6

ಶಿರಾದಲ್ಲೂ ಬಿಜೆಪಿ ಮುನ್ನಡೆ

ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ವಿವರ ಈ ಕೆಳಗಿನಂತಿದೆ

ಬಿಜೆಪಿ – 6,436

ಕಾಂಗ್ರೆಸ್ – 4,729

ಜೆಡಿಎಸ್ – 2714

Join Whatsapp
Exit mobile version