Home ರಾಜ್ಯ ಸಚಿವ ವಿ.ಸೋಮಣ್ಣ ಮಾಡಿದ ಹಲ್ಲೆ ಬಿಜೆಪಿ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ: ಕೂಡಲೇ...

ಸಚಿವ ವಿ.ಸೋಮಣ್ಣ ಮಾಡಿದ ಹಲ್ಲೆ ಬಿಜೆಪಿ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ: ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಲು ಕಾಂಗ್ರೆಸ್ ಆಗ್ರಹ

ಬೆಂಗಳೂರು: ಸಹಾಯ ಯಾಚಿಸಿ ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ವಸತಿ ಸಚಿವ. ವಿ ಸೋಮಣ್ಣ ರವರ ನಡೆಯ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಕೂಡ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ‘ಸಿಎಂ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ, ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ, ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿದೆ.

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಮಾಡಿದ ಹಲ್ಲೆ ಬಿಜೆಪಿ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ. ಸ್ವತಃ ಬಿಜೆಪಿ ಸರ್ಕಾರದ ಸಚಿವರೇ ನಡೆಸುವ ದೌರ್ಜನ್ಯಗಳಿಗೆ ಕ್ರಮ ಕೈಗೊಳ್ಳದ ಸಿಎಂ ಬೊಮ್ಮಾಯಿ ಅವರಿಂದ ರಾಜ್ಯದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ಮಹಿಳಾವಿರೋಧಿಬಿಜೆಪಿ ನಡೆಸಿದ ದೌರ್ಜನ್ಯ ಒಂದೆರಡಲ್ಲ. ಶಾಸಕ ಸಿದ್ದು ಸವದಿಯವರಿಂದ ಮಹಿಳೆಯ ಮೇಲೆ ಹಲ್ಲೆ. ರಮೇಶ್ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ತಿಳಿದ ವಿಚಾರ. ಮಹಿಳೆಯರಿಗೆ ನಿಂದಿಸಿದ್ದರು ಮಾಧುಸ್ವಾಮಿ, ಅರವಿಂದ್ ಲಿಂಬಾವಳಿ. ಈಗ ವಿ.ಸೋಮಣ್ಣರಿಂದ ಹಲ್ಲೆ. ಬಿಜೆಪಿಗರಿಗೆ ರಾಮನಷ್ಟೇ ಅಲ್ಲ, ರಾವಣನ ಹೆಸರನ್ನೂ ಹೇಳುವ ಯೋಗ್ಯತೆ ಇಲ್ಲ’ ಎಂದು ಕಟುವಾಗಿ ಟೀಕಿಸಿದೆ.

Join Whatsapp
Exit mobile version