ಮುಸ್ಲಿಂ ಮೀಸಲಾತಿಗೆ ಕೊಕ್ ನೀಡಿದ ರಾಜ್ಯ ಸರ್ಕಾರ

Prasthutha|

- Advertisement -

ಬೆಂಗಳೂರು: ರಾಜ್ಯ ಸರ್ಕಾರ ಹಿಂದುಳಿದ ವರ್ಗದಿಂದ ಮುಸ್ಲಿಂ ಮೀಸಲಾತಿಗೆ ಕೊಕ್ ನೀಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ (EWS) ಮಾಡಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಪ್ರವರ್ಗ 2ಬಿ ರದ್ದು ಮಾಡಲಾಗಿದೆ.

Ews ಕೋಟಾದಲ್ಲೆ ಮುಸ್ಲಿಮರನ್ನು ಸೇರಿಸಲಾಗಿದ್ದು, ಮುಸ್ಲಿಮರ 4 ಶೇಕಡಾ ಮೀಸಲಾತಿಯನ್ನು ಒಕ್ಕಲಿಗರಿಗೆ 2, ಲಿಂಗಾಯತರಿಗೆ ಶೇಕಡಾ 2ರಂತೆ ಹಂಚಿಕೆ ಮಾಡಲಾಗಿದೆ.

- Advertisement -

3ಎ ಪ್ರವರ್ಗದಡಿ ಒಕ್ಕಲಿಗರಿಗಿದ್ದ 4% ಮೀಸಲಾತಿ ರದ್ದು ಮಾಡಿದ ಸರಕಾರ 2ಸಿ ಪ್ರವರ್ಗ ಸೃಷ್ಟಿಸಿದೆ. ಈ ಪ್ರವರ್ಗದ ಮೂಲಕ ಹೆಚ್ಚುವರಿಯಾಗಿ 2% ಮೀಸಲಾತಿ ನೀಡಿದ್ದರಿಂದ 2ಸಿ ಮೂಲಕ ಒಕ್ಕಲಿಗರ ಮೀಸಲಾತಿ ಪ್ರಮಾಣ 6% ಕ್ಕೆ ಏರಿಕೆಯಾಗಿದೆ.

Join Whatsapp