Home ಟಾಪ್ ಸುದ್ದಿಗಳು ಪ್ರಧಾನಿ ಪ್ರವಾಸದ ವೇಳೆ ರಸ್ತೆ ಅಭಿವೃದ್ಧಿಗೆ 23 ಕೋಟಿ ರೂ. ವ್ಯಯಿಸಿದ ಬಿಬಿಎಂಪಿ !

ಪ್ರಧಾನಿ ಪ್ರವಾಸದ ವೇಳೆ ರಸ್ತೆ ಅಭಿವೃದ್ಧಿಗೆ 23 ಕೋಟಿ ರೂ. ವ್ಯಯಿಸಿದ ಬಿಬಿಎಂಪಿ !

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸುಮಾರು 23 ಕೋಟಿ ರೂ. ಗಳನ್ನು ಬಿಬಿಎಂಪಿ ವ್ಯಯಿಸಿರುವ ಅಂಶ ಬೆಳಕಿಗೆ ಬಂದಿದೆ. ನಿನ್ನೆ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ರಸ್ತೆ ಮಾರ್ಗವಾಗಿ ಬೆಂಗಳೂರಿನ ಕೆಲವೆಡೆ ಸಂಚರಿಸಿದ್ದರು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 23 ಕೋಟಿ ರೂ. ಖರ್ಚು ಮಾಡಿದೆ.

ಪ್ರಧಾನಿ ಮೋದಿ ಭೇಟಿಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಲು ಆದೇಶ ನೀಡಿದ್ದು, ಇದರನ್ವಯ ನಗರಾಭಿವೃದ್ದಿ ಯೋಜನೆಯಡಿಯಲ್ಲಿ ಸುಮಾರು 23 ರೂ. ಕೋಟಿ ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ವಿಶೇಷ ಯೋಜನಾ ವಿಭಾಗದ ಆಯುಕ್ತ ರವೀಂದ್ರ ಪಿ.ಎನ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನಿಗಧಿಪಡಿಸಿದ ಕಾರ್ಯಕ್ರಮಕ್ಕೆ ತೆರಳುವ ರಸ್ತೆಗಳನ್ನು ನವೀಕರಿಸಲಾಗಿದ್ದು, ವಾರದೊಳಗೆ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊಮ್ಮಘಟ್ಟ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಹೆಬ್ಬಾಳ ಸೇರಿದಂತೆ ಇತರೆ ಹಲವು ಗಳಲ್ಲಿ ಸುಮಾರು 14 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇದಕ್ಕಾಗಿ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಬಿಬಿಎಂಪಿ ಒಟ್ಟು 23 ಕೋಟಿ ರೂ. ವ್ಯಯಿಸಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version