Home ಟಾಪ್ ಸುದ್ದಿಗಳು ಕಾರ್ಕಳ: ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು

ಕಾರ್ಕಳ: ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು

ಕಾರ್ಕಳ: ಕಾರ್ಕಳ- ಧರ್ಮಸ್ಳಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ನಡೆದ ಘಟನೆ ಸೋಮವಾರ (ಸೆ.30) ನಡೆದಿದೆ.

ಬೈಕಿನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದು, ಬೈಕಿನಲ್ಲಿದ್ದ ನಾಲ್ಕು ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಸುರೇಶ್ ಆಚಾರ್ಯ (36), ಸಮೀಕ್ಷಾ (7) ಸುಶ್ಮೀತಾ (5) ಮತ್ತು ಸುಶಾಂತ್ (2) ಮೃತಪಟ್ಟವರು.ಮೀನಾಕ್ಷಿ ಆಚಾರ್ಯ (32) ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Join Whatsapp
Exit mobile version