Home ಕರಾವಳಿ ಲಸಿಕೆ ಒದಗಿಸಲು ಕಿಂಚಿತ್ತೂ ಶ್ರಮ ವಹಿಸದ ಸಂಸದೆ, ಕ್ರೈಸ್ತ ಧರ್ಮದ ಮೇಲೆ ಗೂಬೆ ಕೂರಿಸುವ‌...

ಲಸಿಕೆ ಒದಗಿಸಲು ಕಿಂಚಿತ್ತೂ ಶ್ರಮ ವಹಿಸದ ಸಂಸದೆ, ಕ್ರೈಸ್ತ ಧರ್ಮದ ಮೇಲೆ ಗೂಬೆ ಕೂರಿಸುವ‌ ಹೇಳಿಕೆ ನೀಡುತ್ತಿರುವುದು ಖಂಡನೀಯ : ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ‌ಹುಸೇನ್

ಚರ್ಚ್ ಗಳಲ್ಲಿ ಲಸಿಕೆಯ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಕ್ರೈಸ್ತ ಧರ್ಮದ ಮೇಲೆ ಗೂಬೆ ಕೂರಿಸುವ‌ ಕೆಲಸ ಮಾಡುತ್ತಿರುವುದು ಖಂಡನೀಯ. ಕೊರೋನಾ‌ ನಿಭಾಯಿಸುವಲ್ಲಿ ವಿಫಲತೆ ಹೊಂದಿರುವ ಬಿಜೆಪಿ ‌ಸರಕಾರದ‌‌ ವಿರುದ್ದ ಜನ ಅಕ್ರೋಶ ಭರಿತರಾಗಿದ್ದು, ಈ ವ್ಯೆಫಲ್ಯವನ್ನು ಮರೆಮಾಚಲು ಇಂತಹ ಬಾಲಿಶ ಹೇಳಿಕೆಯನ್ನು ನೀಡಿ ಜನರ ಆಕ್ರೋಶ ವನ್ನು ಬೇರೇಡೆಗೆ ತಿರುಗಿಸುವ‌ ಪ್ರಯತ್ನವನ್ನು ಸಂಸದೆಯವರು ಮಾಡುತಿದ್ದಾರೆ ಕಾಪು ಬ್ಲ್ಯಾಕ್ ಯುವ‌ ಕಾಂಗ್ರೆಸ್ ಅಧ್ಯಕ್ಷ ‌ರಮೀಝ್ ಹುಸೇನ್ ಹೇಳಿದ್ದಾರೆ.

ಕರಾವಳಿ ಭಾಗದಲ್ಲಿ ತೌಖ್ತೇ ಚಂಡಮಾರುತದಿಂದ‌ ಮನೆ,  ರಸ್ತೆ ಗಳು ಅಪಾರ ಹಾನಿಯಾಗಿ ಬಹಳಷ್ಟು ನಷ್ಟ ಸಂಭವಿಸಿದ್ದು ಮೀನುಗಾರಿಕೆ ಇಲ್ಲದೇ ಮೀನುಗಾರರ ಬದುಕು ಹತಾಶೆಗೊಂಡಿದೆ. ಕೊರೋನಾ‌ ಲೌಕ್ ಡಾನ್ ಸಂಕಷ್ಟದಿಂದ‌ ಬಳಲುತ್ತಿರುವ ಇಂತಹ ಸಂದರ್ಭದಲ್ಲಿ ‌ಚಂಡಮಾರುತದ‌ ಹೊಡೆತದಿಂದ ಅಪಾರ ನಷ್ಟ ಸಂಭವಿಸಿ ಜನತೆ ಅರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಸರಕಾರ ದಿಂದ ಪರಿಹಾರ ಒದಗಿಸುವ‌ ಬಗ್ಗೆ ಕಿಂಚಿತ್ತೂ ಪ್ರಯತ್ನ ಪಡದ ಸಂಸದೆಯವರು ಇಂತಹ‌ ಧರ್ಮವನ್ನು ನಿಂದಿಸುವ‌ ಕೆಲಸ ಮಾಡುತ್ತಿರುವುದು ನಾಚಿಕೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಪ್ರಧಾನ ಮಂತ್ರಿಗಳು ಗುಜರಾತ್ ನಲ್ಲಿ ತೌಖ್ತೇ ಚಂಡಮಾರುತ ಹೊಡೆತದ ನಷ್ಟ ಪರಿಹಾರವಾಗಿ 1000 ಕೋಟಿ ರೂಪಾಯಿ ಬಿಡುಗಡೆ  ಮಾಡಿದ್ದಾರೆ. ಕರ್ನಾಟಕ ಜನತೆ ಏನು ಪಾಪ ಮಾಡಿದ್ದಾರೆ. ಇಂತಹಾ ತಾರತಮ್ಯ ವೇಕೆ? ಈ ಬಗ್ಗೆ  ಯಾಕೆ ಸಂಸದರು ಮಾತನಾಡುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ವ್ಯೆಫಲ್ಯ ಗಳನ್ನು ಮುಚ್ಚು ಮರೆ ಮಾಡಲು ಕಾಂಗ್ರೆಸ್ ನ ಮೇಲೆ ಟೂಲ್ ಕಿಟ್ ಪ್ರಕರಣದ ಬಗ್ಗೆ ಸುಳ್ಳು ಹೇಳಿಕೆ ಗಳನ್ನು ನೀಡಿ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಸರಕಾರ ಮಾಡುತ್ತಿದೆ. ಇಂತಹ ನೀಚ ಹೇಳಿಕೆ ಯನ್ನು ಕೊಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಮತ್ತು ರಾಜ್ಯದ ‌ಅಭಿವೃದ್ದಿಯ ಬಗ್ಗೆ ಗಮನ ಹರಿಸಲಿ. ತಮ್ಮ ಜವಾಬ್ದಾರಿಯನ್ನು ಅರಿತು ಕೇಂದ್ರ ಸರಕಾರದಿಂದ ‌ಅನುದಾನ ತರಿಸಿ ತನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾದ ಸಂಸದೆ, ಜಾತಿ ಧರ್ಮವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ,ಶಾಂತಿ ಹಾಗೂ ಸಹಬಾಳ್ವೆ ಜೀವನಕ್ಕೆ ಹೆಚ್ಚಿನ ‌ಒತ್ತು ನೀಡಿ ಜೀವನ ನಡೆಸುವ‌ ಕ್ರಿಶ್ಚಿಯನ್ ಧರ್ಮದವರಲ್ಲಿ ಸಂಸದೆ ಕ್ಷಮೆ ಯಾಚಿಸಬೇಕು ಎಂದು ರಮೀಝ್ ಹುಸೇನ್ ಆಗ್ರಹಿಸಿದ್ದಾರೆ.

Join Whatsapp
Exit mobile version