Home ಕರಾವಳಿ ಕಾಪು ಮುನ್ಸಿಪಾಲಿಟಿ ಚುನಾವಣೆ ಎಸ್ಡಿಪಿಐ ಸಿದ್ಧತಾ ಸಭೆ

ಕಾಪು ಮುನ್ಸಿಪಾಲಿಟಿ ಚುನಾವಣೆ ಎಸ್ಡಿಪಿಐ ಸಿದ್ಧತಾ ಸಭೆ

ಕಾಪು: ಉಡುಪಿ ಜಿಲ್ಲೆಯ ಕಾಪು ಮುನ್ಸಿಪಾಲಿಟಿ ಚುನಾವಣೆ ಡಿಸೆಂಬರ್ ತಿಂಗಳ ಕೊನೆಯ ಭಾಗದಲ್ಲಿ ನಡೆಯಲಿರುವುದರಿಂದ ಎಸ್ಡಿಪಿಐ ತನ್ನ ಅಭ್ಯರ್ಥಿಗಳನ್ನು ಸ್ಪರ್ಧಿಸುವ ಬಗ್ಗೆ ಚರ್ಚಿಸಲು ಪೂರ್ವ ತಯಾರಿ ಸಭೆ ಉಡುಪಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ಕಾಪು ನಲ್ಲಿ ನಡೆಯಿತು.

ಕಾಪು ಮುನ್ಸಿಪಾಲಿಟಿ ಯಲ್ಲಿ ಒಟ್ಟು 23 ವಾರ್ಡ್ಗಳಿದ್ದು ಎಲ್ಲಾ ವಾರ್ಡ್ ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಚುನಾವಣಾ ಉಸ್ತುವಾರಿಯಾಗಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ,ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲೀ,ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಕಾಪು ಅಸೆಂಬ್ಲಿ ಅಧ್ಯಕ್ಷ ಹನೀಫ್ ಮೂಳೂರ್,ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್,ಹಾಶಿಮ್,ಜಿಲ್ಲಾ ನಾಯಕರುಗಳಾದ ಸಾಧಿಕ್ ಉಡುಪಿ, ಫಯಾಝ್,ಸಾಧಿಕ್ ಕಾಪು,ನಝೀರ್ ಅಹ್ಮದ್ ಕಾಪು,ಫಹೀಮ್,ಫಾರೂಕ್,ಅಯ್ಯುಬ್,ಶಮೀರ್,ಅಬ್ದುಲ್ಲಾ,ಸುಲೈಮಾನ್,ಮೊಹಿನುದ್ದೀನ್,ಫೈಝಲ್ ಮುಂತಾದವರು ಉಪಸ್ಥಿತರಿದ್ದರು.

Join Whatsapp
Exit mobile version