Home ಟಾಪ್ ಸುದ್ದಿಗಳು ತಲೆ ಎತ್ತಿ ಓಡಾಡಿ: ರೋಹಿತ್ ಶರ್ಮಾಗೆ ಧೈರ್ಯ ತುಂಬಿದ ಕಪಿಲ್ ದೇವ್

ತಲೆ ಎತ್ತಿ ಓಡಾಡಿ: ರೋಹಿತ್ ಶರ್ಮಾಗೆ ಧೈರ್ಯ ತುಂಬಿದ ಕಪಿಲ್ ದೇವ್

ನವದೆಹಲಿ: ಹೆಮ್ಮೆಯಿಂದ ತಲೆ ಎತ್ತಿ ನಡೆಯಿರಿ ಎಂದು ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಅವರು ವಿಶ್ವಕಪ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ರೋಹಿತ್ ತಂಡದ ಗುಣಗಾನ ಮಾಡಿದ್ದಾರೆ.


ನೀವು ಚಾಂಪಿಯನ್ ಗಳಂತೆ ಆಡಿದ್ದೀರಿ. ಹೆಮ್ಮೆಯಿಂದ ತಲೆ ಎತ್ತಿ ನಡೆಯಿರಿ. ನಿಮ್ಮ ಮನಸ್ಸಿನಲ್ಲಿ ಟ್ರೋಫಿಯನ್ನು ಹೊರತುಪಡಿಸಿ ಬೇರಾವುದೇ ಆಲೋಚನೆ ಇರಲಿಲ್ಲ. ನೀವು ಎಂದೆಂದಿಗೂ ವಿಜೇತರೇ. ನಿಮ್ಮ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ರೋಹಿತ್, ನಿಮ್ಮ ಕೆಲಸದಲ್ಲಿ ಮಾಸ್ಟರ್ ನೀವು. ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ನಿಮಗೆ ಕಾಯುತ್ತಿದೆ. ಇದು ಕಷ್ಟದ ಸಮಯ ಎಂದು ನನಗೆ ಗೊತ್ತು. ಆದರೆ ಉತ್ಸಾಹ ಕಳೆದುಕೊಳ್ಳಬೇಡಿ. ಭಾರತ ನಿಮಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ.

Join Whatsapp
Exit mobile version